ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1499ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಪ್ಪ ವೃತ್ತದಲ್ಲಿ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನೀಡಲಾಯಿತು. 
ಜಿಲ್ಲೆ

ಕುಶಾಲನಗರದಲ್ಲಿ ಸೌಹಾರ್ದ ಜಾಥಾ

ಅಭಿನಯ್ ಎಚ್.ಎಂ

ಕುಶಾಲನಗರ: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1499ನೇ ವರ್ಷದ ಜನ್ಮ ದಿನ ಅಂಗವಾಗಿ ಸೋಮವಾರ ಇಲ್ಲಿನ ಮುಸ್ಲಿಮರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌಹಾರ್ದ ಜಾಥಾ ನಡೆಸಿದರು.

ಈ ಸಂದರ್ಭ ಶಾಂತಿ ಮತ್ತು ಸೌಹಾರ್ದತೆಯ ಘೋಷಣೆಗಳನ್ನು ಕೂಗುವ ಮೂಲಕ ಸಹೋದರತೆ ಹಾಗೂ ಸಾಮರಸ್ಯದ ಸಂಕೇತ ಸಾರಿದರು. ದಾರುಲ್ ಉಲೂಂ ಮದರಸ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ದಫ್ ಪ್ರದರ್ಶಿಸಲಾಯಿತು.

ಮೆರವಣಿಗೆಯು ದಾರುಲ್ ಮದರಸದಿಂದ ಪ್ರಾರಂಭವಾಗಿ ಕಾರ್ಯಪ್ಪ ವೃತ್ತದ ಮೂಲಕ ಹಾದುಹೋಗಿ, ದಂಡಿನ್ಪೇಟೆಗೆ ತೆರಳಿ ನಂತರ ದಾರುಲ್ ಉಲೂಂ ಮದರಸಕ್ಕೆ ಹಿಂದಿರುಗಿತು.

ದಾರುಲ್ ಉಲೂಂ ಮದ್ರಸದ ಅಧ್ಯಕ್ಷರು, ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ನೂರುಲ್ ಇಹ್ಸಾನ್ ಯೂತ್ ಕಮಿಟಿ ಬಾರವಾಹಿಗಳು, ಊರಿನ ಪ್ರಮುಖರು ಹಾಗೂ ಮುಸಲ್ಮಾನ ಸಹೋದರರು ಇದ್ದರು.