ಜಿಲ್ಲೆ

ಸ್ನೇಹಿತನಿಗೆ ಚಾಕುವಿನಿಂದ ಇರಿತ

ಹುಬ್ಬಳ್ಳಿ: ಹಣಕಾಸು ವಿಷಯವಾಗಿ ವ್ಯಕ್ತಿಯೊಬ್ಬನ ಮೇಲೆ ಆತನ ಸ್ನೇಹಿತನೇ ಚಾಕುವಿನಿಂದ ಹಲ್ಲೆಗೈದ ಘಟನೆ ಸೋಮವಾರ ರಾತ್ರಿ ಹಳೇ ಹುಬ್ಬಳ್ಳಿ ಹೆಗ್ಗೇರಿಯ ಮಸೀದಿ ಬಳಿ ನಡೆದಿದೆ.

ಘಟನೆಯಲ್ಲಿ ಇರ್ಫಾನ್ ಹಾಗೂ ಮತ್ತೊಬ್ಬ ಗಾಯಗೊಂಡಿದ್ದು, ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಲಿಕ್ ಎಂಬಾತ ಹಣಕಾಸಿನ ವಿಷಯ ಮಾತನಾಡುವುದಿದೆ ಎಂದು ಇರ್ಫಾನ್‌ನ್ನು ಹೆಗ್ಗೇರಿಯ ಮಸೀದಿ ಬಳಿ ಕರೆಸಿಕೊಂಡಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದಾಗ ಮಲ್ಲಿಕ್ ಚಾಕುವಿನಿಂದ ಇರ್ಫಾನ್ ಮತ್ತು ಇನ್ನೊಬ್ಬನ ಮೇಲೆ ಹಲ್ಲೆ ಮಾಡಿದ್ದಾನೆ. ಮಲ್ಲಿಕ್ ಜತೆ 5-6 ಜನರ ಗುಂಪು ಇತ್ತು ಎನ್ನಲಾಗಿದೆ. ಇರ್ಫಾನ್ ಮತ್ತು ಮಲ್ಲಿಕ್ ಇಬ್ಬರೂ ರೌಡಿಶೀಟರ್‌ಗಳಾಗಿದ್ದಾರೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.