ಎಂಆರ್‌ಪಿಎಲ್‌ನ ಜಾಗೃತಿ ಅಭಿಯಾನ ‘ಸ್ವಚ್ಛತಾ ಪಖ್ವಾಡ-2023 ಹಿನ್ನೆಲೆಯಲ್ಲಿ ಕಟೀಲಿನಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ನಡೆಯಿತು. ಎಂಆರ್‌ಪಿಎಲ್ ಸ್ವತಂತ್ರ ನಿರ್ದೇಶಕರಾದ ನಿವೇದಿತಾ ಸುಬ್ರಮಣಿಯನ್, ಕಟೀಲು ದೇವಸ್ಥಾನದ ಶ್ರೀ ಹರಿನಾರಾಯಣ ಆಸ್ರಣ್ಣ, ಕೆಎಂಸಿ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಶಿವಾನಂದ ಪ್ರಭು ಸೇರಿದಂತೆ ಹಲವರು ಇದ್ದರು. 
ಜಿಲ್ಲೆ

ಕಟೀಲಿನಲ್ಲಿ ಆರೋಗ್ಯ ಶಿಬಿರ ಸಂಪನ್ನ

ಮಂಗಳೂರು: ಎಂಆರ್‌ಪಿಎಲ್ ಜಾಗೃತಿ ಅಭಿಯಾನ ‘ಸ್ವಚ್ಛತಾ ಪಖ್ವಾಡ-2023’ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದೊಂದಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವೃತ್ತಿಪರರ ಮೂಲಕ ಕಟೀಲಿನಲ್ಲಿ ಆರೋಗ್ಯ ಉಚಿತ ಶಿಬಿರ ನಡೆಯಿತು.

ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ನಡೆದ ಶಿಬಿರದಲ್ಲಿ ರಕ್ತದೊತ್ತಡ ಮತ್ತು ಸಕ್ಕರೆ ತಪಾಸಣೆ, ಇಸಿಜಿ, ಔಷಧ ವಿತರಣೆ ಮತ್ತು ಕನ್ನಡಕಗಳನ್ನು ಒದಗಿಸಲಾಯಿತು. ಕಾರ್ಡಿಯಾಲಜಿ, ಇಎನ್‌ಟಿ, ನೇತ್ರಶಾಸ್ತ್ರ, ಆರ್ಥೋ, ಜನರಲ್ ಸರ್ಜರಿ, ಸ್ತ್ರೀರೋಗ ತಜ್ಞರು ವೈದ್ಯಕೀಯ ತಪಾಸಣೆ ನಡೆಸಿ ಅಗತ್ಯವಿರುವವರಿಗೆ ಸಮಾಲೋಚನಾ ಸೇವೆ ಒದಗಿಸಿದರು. 100ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು.

ಎಂಆರ್‌ಪಿಎಲ್ ಸಿಎಎಸ್‌ಆರ್ ಮತ್ತು ಎಸ್‌ಡಿ ವಿಭಾ ಅಧ್ಯಕ್ಷೆ ಹಾಗೂ ಸ್ವತಂತ್ರ ನಿರ್ದೇಶಕರಾದ ನಿವೇದಿತಾ ಸುಬ್ರಮಣಿಯನ್, ಕಟೀಲು ದೇವಸ್ಥಾನದ ಹರಿನಾರಾಯಣ ಆಸ್ರಣ್ಣ, ಕೆಎಂಸಿ ಆಸ್ಪತ್ರೆ ಜನರಲ್ ಸರ್ಜನ್ ಡಾ.ಶಿವಾನಂದ ಪ್ರಭು ಮತ್ತು ಹೃದ್ರೋಗ ತಜ್ಞ ಡಾ.ನರಸಿಂಹ ಪೈ, ಎಂಆರ್‌ಪಿಎಲ್‌ನ ಸಿಜಿಎಂ ಅಡ್ಮಿನ್ ಮನೋಜ್ ಕುಮಾರ್ ಎ., ಸಿಎಸ್‌ಆರ್ ವಿಭಾಗದ ಜಿಎಂ ಮಾಲತೇಶ್ ಎಂ.ಎಚ್., ಸಿಎಸ್‌ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ನಾಗರಾಜ್ ರಾವ್, ಕಾರ್ಯನಿರ್ವಾಹಕ ಸ್ಟೀವನ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.