ಜಿಲ್ಲೆ

ತ್ಯಾಗ, ಬಲಿದಾನದಿಂದ ಸ್ವಾತಂತ್ರ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ$್ಯ ಸಿಕ್ಕಿದ್ದು, ಅದನ್ನ ಉಳಿಸುವಕೊಳ್ಳುವ ಕಾರ್ಯ ಆಗಬೇಕಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್​.ವೇಣುಗೋಪಾಲರೆಡ್ಡಿ ತಿಳಿಸಿದರು.

ನಗರದಲ್ಲಿ ಗುರುವಾರ ಬಿಜೆಪಿಯಿಂದ ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶವನ್ನು ಹಗಲಿರಳು ನಮ್ಮ ಸೈನಿಕರು ಕಾಯುತ್ತಿದ್ದಾರೆ. ಅವರಿಗೆ ಮನ@ಪೂರ್ವಕಾಗಿ ಅಭಿನಂದನೆ ಸಲ್ಲಿಸಬೇಕು. ನಾವು ಸೈನಿಕರ ಬೆಂಬಲಕ್ಕೆ ನಿಂತು ಯಾವುದೇ ರೀತಿ ದೇಶದ್ರೋಹ ಕೆಲಸ ಆಗದಂತೆ ತಡೆಯಬೇಕು ಎಂದರು.

ಡಾ.ಬಿ.ಆರ್​. ಅಂಬೇಡ್ಕರ್​ ರಚಸಿರುವ ಸಂವಿಧಾನದಿಂದ ಇಂದು ನಾವು ಬದಕು ಕಟ್ಟಿಕೊಳ್ಳುತ್ತಿದ್ದು, ಅವರ ಆಶಯಕ್ಕೆ ನಾವೆಲ್ಲೂರು ಗೌರವ ಸಲ್ಲಿಸಬೇಕೀದೆ ಎಂದು ಮಂಡಲ ಅಧ್ಯಕ್ಷ ರೋಣುರು ಆರ್​.ಎನ್​.ಚಂದ್ರಶೇಖರ್​ ತಿಳಿಸಿದರು.

ತಹಸೀಲ್ದಾರ್​ ಕಚೇರಿ ಆವರಣದಲ್ಲಿರುವ ಅಂಬೆಡ್ಕರ್​ ಪುತ್ಥಳಿಗೆ ಪುಷ್ಪಮಾಲೆ ಸಮರ್ಪಿಸಲಾಯಿತು. ಪಟ್ಟಣದ ವರದಬಾಲಂಜನೇಯ ಸ್ವಾಮಿ ದೇವಾಲಯದಿಂದ ಮುಳಬಾಗಿಲು ವೃತ್ತದವರೆಗೂ ಬೈಕ್​ ರ್ಯಾಲಿ ಹಮ್ಮಿಕೊಳ್ಳಲಾಯಿತು.