ರಬಕವಿ /ಬನಹಟ್ಟಿ: ದೇವರ ಮೇಲೆ ಅನನ್ಯ ಭಕ್ತಿ ಇದ್ದರೆ ಮಾತ್ರ ಕಷ್ಟ ಕಾರ್ಪಣ್ಯ ಮುಕ್ತಿ ದೊರೆಯುತ್ತದೆ ಎಂದು ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುರುವಾರ ತಾಲೂಕಿನ ನಾವಲಗಿ ಗ್ರಾಮದ ನೀಲಕಂಠೇಶ್ವರ ಮಠದಲ್ಲಿ ಶಿವರಾತ್ರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಂಧು ಬಾಂಧವರು ಕೈ ಬಿಟ್ಟರು ದೇವರು ಮತ್ತು ಗುರು ಎಂದಿಗೂ ಕೈಬಿಡಲಾರರು, ಕಳೆದ 15 ದಿನಗಳಿಂದ ಲಿಂಗೈಕ್ಯ ಶಂಕರ ಶಿವಾಚಾರ್ಯರ ಜೀವನ ಚರಿತ್ರೆಯ ಪ್ರವಚನವನ್ನು ಕೇಳಿ ಧನ್ಯರಾಗಿದ್ದಿರಿ. ಇಂತಹ ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಹಾದಿ ಹಿಡಿಯಬೇಕು. ಧರ್ಮ ಮತ್ತು ಭಕ್ತಿ ಮಾರ್ಗದಲ್ಲಿ ನಡೆದರೆ ಜಯ ನಿಶ್ಚಿತ. ದೇವರಲ್ಲಿ ಶ್ರದ್ದಾಪೂರ್ವ ಭಕ್ತಿ ಇರಬೇಕು. ಸ್ವಚ್ಚತೆ, ಶಿಸ್ತು ಹಾಗೂ ಆರೋಗ್ಯಪೂರ್ಣ ಜೀವನ ಶ್ರೇಷ್ಠವಾದದ್ದು ಎಂದರು.
ಡಾ. ವಿವೇಕಾನಂದ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಆಧ್ಯಾತ್ಮಕ್ಕೆ ಅಪಾರ ಶಕ್ತಿ ಇದೆ. ಸದಾ ನಾವೂ ದೇವರ ನಾಮ ಸ್ಮರಣೆ ಮಾಡುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದರು.
ಪ್ರವಚನ ಪಟು ಶ್ರೀಶೈಲಯ್ಯ ಹಿರೇಮಠ ಶ್ರೀಗಳು ಮಾತನಾಡಿದರು.
ಗ್ರಾಮದ ಹಿರಿಯರಾದ ಬಸಯ್ಯ ಹಿರೇಮಠ, ಬಸಪ್ಪ ಎಂಟೇತ್ತಿನವರ, ಮಹಾದೇವಪ್ಪ ಹಳ್ಳಿಸುಭಾಸ ಕಂಪು, ಶಿವನಪ್ಪ ಹಳ್ಳಿ, ಚಿನ್ನಪ್ಪ ಸಂಗಾನಟ್ಟಿ, ಮಂಜುನಾಥ ಕಂಪು, ದಾನಪ್ಪ ಅಸಂಗಿ, ಆನಂದ ಕಂಪು, ಸಿದ್ದು ಸಣಪೇಟಿ, ಶ್ರೀಶೈಲ ಹಳ್ಳಿ, ಮಲ್ಲಪ್ಪ ಸಂಗಾನಟ್ಟಿ, ಎಂ.ಆರ್. ವಾಲಿ, ಈರಪ್ಪ ವಾಲಿ, ಮಹೇಶ ಚಿಚಖಂಡಿ, ಮಹಾಂತೇಶ ಮನ್ಮಿ, ಬಸವರಾಜ ಗಣಿ, ಸಿದ್ದು ಕಂಚು, ರಾಜು ಕದಂ, ಈರಪ್ಪ ಕಡಕಬಾವಿ ಮತ್ತಿತರರಿದ್ದರು.