ಜುಗೂಳ ಗ್ರಾಮದ ಗಾಂಧಿ ವೃತ್ತದಲ್ಲಿ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು. ಮಹಾಂತೇಶ ಕವಟಗಿಮಠ, ಅಣ್ಣಾಸಾಬ ಪಾಟೀಲ, ಕಾಕಾಸಾಬ ಪಾಟೀಲ, ನೀತಾ ಕಾಂಬಳೆ ಇತರರು ಇದ್ದಾರೆ. 
ಜಿಲ್ಲೆ

ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ಮುಖ್ಯ

ಪ್ರಶಾಂತ ಹೂಗಾರ

ಕಾಗವಾಡ: ದೇಶಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಸೇನಾನಿಗಳನ್ನು ಎಂದಿಗೂ ಮರೆಯಬಾರದು ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ತಾಲೂಕಿನ ಜುಗೂಳ ಗ್ರಾಮದ ಗಾಂಧಿ ವೃತ್ತದಲ್ಲಿ ಗುರುವಾರ 78ನೇ ಸ್ವಾತಂತ್ರೊೃೀತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಅಣ್ಣಾಸಾಬ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಕಾಸಾಬ ಪಾಟೀಲ, ಉಪಾಧ್ಯಕ್ಷೆ ನೀತಾ ಕಾಂಬಳೆ, ಮುಖಂಡರಾದ ಅನಿಲ ಕಡೋಲೆ, ಸುಧಾಕರ ಗಣೇಶವಾಡಿ, ತಾತ್ಯಾಸಾಬ ಪಾಟೀಲ, ಅರುಣ ಗಣೇಶವಾಡಿ, ಅನಿಲ ಸುಂಕೆ, ಬಾಬಾಸಾಬ ಪಾಟೀಲ, ಪಿಡಿಒ ಶೈಲಶ್ರೀ ಭಜಂತ್ರಿ ಇತರರಿದ್ದರು.