ಚಾಂಪಿಯನ್ ಪಟ್ಟ ಅಲಂಕರಿಸಿದ ಫ್ರೀಡಂ ಬಾಯ್ಸ ಹುಂಡಿ ತಂಡ. 
ಜಿಲ್ಲೆ

ಫ್ರೀಡಂ ಬಾಯ್ಸ್ ಹುಂಡಿ ತಂಡ ಚಾಂಪಿಯನ್

ಸಿದ್ದಾಪುರ: ಸಹರಾ ಯೂತ್ ಕ್ಲಬ್ ಆಶ್ರಯದಲ್ಲಿ ಚೆನ್ನಯ್ಯನ ಕೋಟೆ ಸರಕಾರಿ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ 3ನೇ ವರ್ಷದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೀಡಂ ಬಾಯ್ಸ ಹುಂಡಿ ತಂಡ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಿದೆ.

ದ್ವಿತೀಯ ಸ್ಥಾನ ಆರ್.ಸಿ.ಬಿ.ಹೊಳಮಳ ತಂಡ ಪಡೆದುಕೊಂಡಿದೆ. ನಾಲ್ಕು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲಿಬೆಟ್ಟ, ಚೆನ್ನಯ್ಯನ ಕೋಟೆ, ಮಾಲ್ದಾರೆ, ಸುತ್ತಮುತ್ತಲ ಗ್ರಾಮಗಳ 14 ತಂಡಗಳು ಪಾಲ್ಗೊಂಡಿದ್ದವು.

ಉತ್ತಮ ಹೊಡೆತ ಶ್ಯಾಮ್ ಪಾಲಿಬೆಟ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರ್‌ಸಿಬಿ ತಂಡದ ಅಲೋಕ್ ಪಡೆದುಕೊಂಡರು. ಫೈನಲ್ ಪಂದ್ಯಾದಲ್ಲಿ ಉತ್ತಮ ಆಟಕ್ಕಾಗಿ ಮ್ಯಾನ್ ಆಫ್ ದಿ ಮ್ಯಾಚ್ ಫ್ರೀಡಂ ಬಾಯ್ಸ ತಂಡದ ಪ್ರವೀಣ್ ಪಡೆದುಕೊಂಡರು. ಸರಣಿಯ ಉತ್ತಮ ಆಟಗಾರ ಪ್ರಶಸ್ತಿಯನ್ನು ಫ್ರೀಡಂ ಬಾಯ್ಸ ತಂಡದ ನಾಯಕ ರಿಯಾಜ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ಮಾತನಾಡಿ, ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದ್ದು. ಕ್ರೀಡಾ ಸೌಹಾರ್ದದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಸಹರಾ ಯೂತ್ ಕ್ಲಬ್‌ನ ಅಧ್ಯಕ್ಷ ಕೆ.ಎಸ್. ಸಿರಾಜ್, ಗ್ರಾಪಂ ಸದಸ್ಯರಾದ ಎಂ.ಎನ್. ವಿಜು, ಪ್ರಭು ಶೀಲ, ನಿಯಾಜ್, ಸಮಾಜ ಸೇವಕ ರತೀಶ್ ಕುಮಾರ್, ಸಹರಾ ಯೂತ್ ಕ್ಲಬ್‌ನ ಕಾರ್ಯದರ್ಶಿ ಸಜರುದ್ದೀನ್, ಗೌರವಾಧ್ಯಕ್ಷ ನಿಶಾದ್, ಸಂಚಾಲಕರಾದ ಆಶೀಫ್ ಉಪಸ್ಥಿತರಿದ್ದರು.