ಜಿಲ್ಲೆ

ವೀಲ್‌ಚೇರ್ ಉಚಿತ ವಿತರಣೆ

ಸೌಮ್ಯ ಆರ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ ತಾಲೂಕು ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಉಚಿತ ವೀಲ್‌ಚೇರ್ ಅನ್ನು ನಡ ಕಾರ್ಯಕ್ಷೇತ್ರದ ಚಂದನ ಸ್ವಸಹಾಯ ಸಂಘ ಸದಸ್ಯ ಅಬ್ದುಲ್ ಹಮೀದ್ ಅವರ ತಾಯಿ ಆರೋಗ್ಯ ಸಮಸ್ಯೆಯಿಂದಾಗಿ ನಡೆದಾಡಲು ಅಸಾಧ್ಯವಾಗಿರುವ ಝುಬೈದಾ ಅವರಿಗೆ ತಾಲೂಕು ಯೋಜನಾಧಿಕಾರಿ ಸುರೇಂದ್ರ ವಿತರಿಸಿದರು.

ನಡ ಗ್ರಾಪಂ ಅಧ್ಯಕ್ಷೆ ಮಂಜುಳಾ, ರತ್ನಾಕರ್, ಊರಿನ ಗಣ್ಯರಾದ ಶ್ಯಾಮ್ ಸುಂದರ್, ಪ್ರೇಮ ಶೆಟ್ಟಿ, ಒಕ್ಕೂಟ ಅಧ್ಯಕ್ಷೆ ರಾಜೇಶ್ವರಿ, ಗೀತಾ, ಒಕ್ಕೂಟ ಕಾರ್ಯದರ್ಶಿ ಉಮೈರಾಬಾನು, ಶಶಿಕಲಾ, ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್, ಸ್ಥಳೀಯರಾದ ಅಬ್ದುಲ್ ಗಫುರ್ ಸಾಹೇಬ್, ಸಾಬ್ ಜಾನ್ ಸಾಹೇಬ್, ಸೇವಾ ಪ್ರತಿನಿಧಿಗಳಾದ ಪುಷ್ಪಾ, ಶಕುಂತಲಾ ಉಪಸ್ಥಿತರಿದ್ದರು.