ಜಿಲ್ಲೆ

35 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ

Avinash R

ಗುರುಪುರ: ಮಂಗಳೂರು ಉರ್ವಸ್ಟೋರ್ ತುಳು ಭವನದಲ್ಲಿ ಮಂಗಳವಾರ ದಿ.ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 35 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು.

ಹೊಲಿಗೆ ಯಂತ್ರ ವಿತರಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವಾತನಾಡಿ, ಇದು ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಯೋಜನೆಯಾಗಿದೆ. ನಿಮ್ಮಿಂದಲೇ ಇದರ ಸದುಪಯೋಗವಾಗಬೇಕು. ಎಂಆರ್‌ಪಿಎಲ್, ಎಂಸಿಎಫ್ ಹಾಗೂ ಇತರ ಸಂಟನೆಗಳ ನೆರವಿನಿಂದ ಇನ್ನೂ 100-200 ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲಿದ್ದೇವೆ. ಈ ಮೂಲಕ ಪ್ರತಿಯೊಬ್ಬ ಮಹಿಳೆ ತನ್ನ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಮತ್ತು ಸ್ವಾವಲಂಬಿಗಳಾಗಬೇಕು ಎಂದರು.

ದಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜು ನಿರೂಪಿಸಿದರು.