ಜಿಲ್ಲೆ

ಸಂಘ ಸಂಸ್ಥೆಗಳಿಂದ ಉಚಿತ ಅನ್ನ ಸಂತರ್ಪಣೆ

Yadgir

ಯಾದಗಿರಿ: ಕರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ಯಾದಗಿರಿ ನಗರದಲ್ಲಿ ನಿರ್ಗತಿಕರಿರುವ ವಿವಿಧ ಬಡಾವಣೆಯ ಜನರಿಗೆ ಮಾಜಿ ಕಾಡಾ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಹಣ್ಣು, ಬ್ರೆಡ್ ವಿತರಿಸಿದರು.

ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ರಗಳು ಶ್ರಮ ವಹಿಸುತ್ತಿವೆ. ಜತೆಗೆ ಕೆಲವೊಂದು ಸಂಘ, ಸಂಸ್ಥೆಗಳು ಸಹಕಾರ ನೀಡುವ ಮೂಲಕ ಈ ಸಂದರ್ಭದಲ್ಲಿ ಸಮುದಾಯಕ್ಕೆ ಧೈರ್ಯ ತುಂಬಬೇಕಿದೆ. ಜನತೆ ಈ ವೈರಸ್ಗೆ ಭಯ ಪಡದೆ ಎಚ್ಚರಿಕೆಯಿಂದಿದ್ದು, ಮನೆಯಲ್ಲಿ ಇರಿ ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಘುವೀರಸಿಂಗ್ ಠಾಕೂರ, ಡಾ.ವೀರೇಶ ಜಾಕಾ, ಸುರೇಶ ಜೈನ್, ಸಾಯಬಣ್ಣ ಕೇಂಗೂರಿ, ಹಣಮಂತ, ಸಾಬರೆಡ್ಡಿ, ತಿಮ್ಮಣ್ಣ ನಾಯಕ, ಜಹೀರ ಸಾಬ್, ಹಣಮಂತ ನಾಯಕ, ಬಸವರಾಜಪ್ಪ, ಶರಣಪ್ಪ ಇದ್ದರು.

ಕಂದಕೂರು ಅಭಿಮಾನಿಗಳಿಂದ ಸತತ 4ನೇ ದಿನ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ಯುವ ಮುಖಂಡ ಮಲ್ಲು ಮಾಳಿಕೇರಿ ನೇತೃತ್ವದಲ್ಲಿ ಗುರುವಾರ ವಿತರಣೆ ಕಾರ್ಯ ಜರುಗಿತು. ಈ ಅವರು ನಿರಾಶ್ರಿತರು, ವಲಸೆ ಬಂದವರು, ಗುಳೆಯಿಂದ ವಾಪಸಾದವರಿಗೆ ಪೌಷ್ಟಿಕ ಆಹಾರ ನೀಡಬೇಕೆಂಬ ಕಾರಣಕ್ಕೆ ಬಿಸಿ ರೈಸ್ ವಿತರಣೆ ಮಾಡಲಾಯಿತು ಎಂದು ಮಾಳಿಕೇರಿ ಹೇಳಿದರು.

ದೆಹಲಿಯ ನಿಜಾಮುದ್ದೀನ್ ತಗ್ಲಿಬ್ ಗೆ ಹೋಗಿ ಬಂದ ಕನ್ನಡಿಗ ಮುಸ್ಲಿಮರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಗೃಹ ದಿಗ್ಬಂಧನಕ್ಕೆ ಒಳಗಾಗಬೇಕು. ಅಲ್ಲಿಂದ ಬಂದವರ ಪೈಕಿ 1500 ಜನರ ಪೈಕಿ 800 ಜನರನ್ನು ಸಕರ್ಾರ ಪತ್ತೆ ಹಚ್ಚಿದೆ. ಆದರೆ ತಲೆ ಮರೆಸಿಕೊಂಡಿರುವ ಮುಸ್ಲಿಂ ಕನ್ನಡಿಗರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ನಿಮ್ಮ ಪ್ರಾಣದ ಜತೆಗೆ ಜನರ ಪ್ರಾಣವನ್ನು ರಕ್ಷಿಸಲು ಮುಂದಾಗಬೇಕೆಂದು ಮನವಿ ಮಾಡಿದರು. ಸಾಹು ಹೋರುಂಚಿ, ಮಿರಾನ್ ಬದ್ದೇಪಲ್ಲಿ, ಪ್ರಬು ಯಡ್ಡಳ್ಳಿ, ಸುಮಂತ ಯಡ್ಡಳ್ಳಿ ಇತರರಿದ್ದರು.