ಜಿಲ್ಲೆ

ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಡಾ.ಕೆ.ಎಸ್. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ ನ. 12ರಂದು ಮಧ್ಯಾಹ್ನ 12ರಿಂದ 1.30ರವರೆಗೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಏರ್ಪಡಿಸಲಾಗಿದೆ.

ಮೊದಲು ಪ್ರಕೃತಿ ಚಿಕಿತ್ಸೆಯ ಮಹತ್ವದ ಕುರಿತು ತಜ್ಞರಿಂದ ವಿಶೇಷೋಪನ್ಯಾಸ ನಡೆಯಲಿದೆ. ನಂತರ ಪ್ರತಿಯೊಬ್ಬರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು. ಈ ಶಿಬಿರದಲ್ಲಿ ಮಧುಮೇಹ, ಕ್ರಾನಿಕ್ ಅಸ್ತಮಾ, ಸಂಧಿವಾತ, ಬೊಜ್ಜುತನ, ಪಾರ್ಶ್ವವಾಯು, ಚರ್ಮರೋಗ, ಕಿಡ್ನಿ ಸ್ಟೋನ್, ಗಾಲ್ ಬ್ಲಾಡರ್ ಸ್ಟೋನ್ ಸೇರಿ ಇತರ ರೋಗಗಳಿಗೆ ಉಚಿತ ಸಲಹೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.