ಜಿಲ್ಲೆ

ಉಚಿತ ಪ್ರಕೃತಿ ಚಿಕಿತ್ಸೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಡಾ. ಕೆ.ಎಸ್​. ಶರ್ಮಾ ಪ್ರಕತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ ಏ. 27ರಂದು ಮಧ್ಯಾಹ್ನ 12 ಗಂಟೆಗೆ ಉಚಿತ ಪ್ರಕತಿ ಚಿಕಿತ್ಸೆ ಸಲಹಾ ಶಿಬಿರ ಏರ್ಪಡಿಸಲಾಗಿದೆ.

ಮಧ್ಯಾಹ್ನ 12 ರಿಂದ 1.30ರವರೆಗೆ ಪ್ರಕತಿ ಚಿಕಿತ್ಸೆಯ ಮಹತ್ವದ ಕುರಿತು ತರಿಂದ ವಿಶೇಷ ಉಪನ್ಯಾಸ ನಡೆಯುವುದು. ನಂತರ ಪ್ರತಿಯೊಬ್ಬರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು.

ಈ ಶಿಬಿರದಲ್ಲಿ ಮಧುಮೇಹ, ಕ್ರಾನಿಕ್​ ಅಸ್ತಮಾ, ಸಂಧಿವಾತ, ಬೊಜ್ಜುತನ, ಪಾರ್ಶ್ವವಾಯು, ಚರ್ಮರೋಗ, ಕಿಡ್ನಿ ಸ್ಟೋನ್​, ಗಾಲ್​ ಬ್ಲಾಡರ್​ ಸ್ಟೋನ್​ ಅಥವಾ ಯಾವುದೇ ಇತರ ರೋಗ ಪೀಡಿತರು ಉಚಿತ ಸಲಹೆ ಪಡೆಯಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಎಸ್​. ಶರ್ಮಾ ತಿಳಿಸಿದ್ದಾರೆ.