ಹೊಸಪೇಟೆ: ವಿಶ್ವ ತಾಯಂದಿರ ದಿನಾಚರಣೆ ನಿಮಿತ್ತ ಮೇ 11ರಂದು ಮಹಿಳೆಯರಿಗಾಗಿ ಉಚಿತ ಧ್ಯಾನ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಿರಾಮಿಡ್ ಸ್ಪಿರಿಚ್ಯುವಲ್ ಸೊಸೈಟಿಯ ವ್ಯವಸ್ಥಾಪಕ ಮಂಜುನಾಥ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನಸಿಕ, ದೈಹಿಕವಾಗಿ ಬಳಲುವ ಮಹಿಳೆಯರಿಗೆ ಸ್ಥೈರ್ಯ ತುಂಬುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೆಮ್ಮದಿ, ಸಂಪೂರ್ಣ ಆರೋಗ್ಯ, ಆತ್ಮ ವಿಶ್ವಾಸ, ದಕ್ಷತೆ, ಏಕಾಗ್ರತೆ, ಗ್ರಹಣ ಶಕ್ತಿ ವೃದ್ಧಿಸುವ ಹಾಗೂ ಜೀವನದ ಧ್ಯೇಯವನ್ನು ಸ್ಪಷ್ಟಪಡಿಸುವ ಕಾರ್ಯಕ್ರಮ ಇದಾಗಿದ್ದು, ಸದುಪಯೋಗ ಪಡೆಯಬೇಕು.
ಧ್ಯಾನ ತರಬೇತುದಾರಾದ ವಿಶಾಲಾಕ್ಷಿ, ಉಮಾರಾಣಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ವಾನಮಣಿ ಗಣೇಶ್ ಕೇಶವರಾಜ್ ಸಂಗೀತ ಸುಧೆ ಹರಿಸಲಿದ್ದಾರೆ ಎಂದು ತಿಳಿಸಿದರು. ಪ್ರಮುಖರಾದ ಮೀನಾ ವೆಂಕಟೇಶ, ಪವಿತ್ರಾ, ರಂಗಮ್ಮ, ವಸಂತ ಕುಮಾರ ಇದ್ದರು.