ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜುಲೈ 7ರಂದು ಮಧ್ಯಾಹ್ನ 2.30 ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಸಹಭಾಗಿತ್ವದಲ್ಲಿ ಆಯುರ್ವೇದ ವೈದ್ಯಕೀಯ ಉಚಿತ ಶಿಬಿರ ನಡೆಯಲಿದೆ.
ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬಳೆ, ಡಾ.ರವಿ ನಾರಾಯಣ, ಸಂಜೀವಿನಿ ಕ್ಲಿನಿಕ್ ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ಸ್ ಕಬಕ, ಸಿಕೆಎಂ ಫಾರ್ಮಸಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಶಿಬಿರ ಆಯೋಜಿಸಲಾಗಿದೆ. ವೈದ್ಯ ಡಾ.ಕೃಷ್ಣ ಮೋಹನ ಬಿ.ಆರ್. ಚಿನ್ಮಯ ಕ್ಲಿನಿಕ್ ಪೆರ್ಲ, ಡಾ.ಸತ್ಯನಾರಾಯಣ ಬಿ.ಪ್ರಶಾಂತಿ ಕ್ಲಿನಿಕ್ ಬಾಯಾರು ಶಿಬಿರ ನಡೆಸಿಕೊಡಲಿರುವರು. ಅಧ್ಯಯನ ಯೋಗ್ಯ ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಪ್ರತಿಷ್ಠಾನ ಉಚಿತ ಆಯುರ್ವೇದ ಶಿಬಿರ ಹಾಗೂ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉಪಯುಕ್ತವಾಗುವ ಇನ್ನಿತರ ಶಿಬಿರಗಳನ್ನು ನಡೆಸಲಿದೆ ಎಂದು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.