ಹುಬ್ಬಳ್ಳಿ : ಹಳೇ ಹುಬ್ಬಳ್ಳಿ, ಹೆಗ್ಗೇರಿಯಲ್ಲಿನ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏ. 26ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕೈ -ಕಾಲು, ಮುಖ, ಬೆನ್ನು ಮತ್ತು ಹೊಟ್ಟೆ ಮೇಲೆ ಬಿಳಿ ಬಣ್ಣದ ಚರ್ಮ ಕಲೆಗಳು (ತೊನ್ನು/ಬಿಳುಪು) ರೋಗಕ್ಕೆ ಸಂಭಂದಿಸಿದಂತೆ ವಿಶೇಷ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.
ಮಹಾವಿದ್ಯಾಲಯ ಆಸ್ಪತ್ರೆಯ ರೋಗನಿಧಾನ ವಿಭಾಗದ ವತಿಯಿಂದ ಏರ್ಪಡಿಸಿರುವ ಈ ಶಿಬಿರದಲ್ಲಿ ಆಸಕ್ತ ರೋಗಿಗಳು ಪಾಲ್ಗೊಳ್ಳಲು ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಹಾಗೂ ರೋಗನಿಧಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಆರ್.ವೈ. ತಿಮ್ಮಾಪುರ ಕೋರಿದ್ದಾರೆ.