ಮುದ್ದೇಬಿಹಾಳ: ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ ಏರ್ಪಡಿಸಲಾಗಿತ್ತು. ಎರಡು ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಸಮಾರಂಭ ಉದ್ಘಾಟಿಸಿ ನವದಂಪತಿಗೆ ಶುಭ ಹಾರೈಸಿದರು. ಯರಝರಿ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಮಲ್ಲಾಲಿಂಗ ಮಹಾಪ್ರಭುಗಳು ಆಶೀರ್ವಚನ ನೀಡಿದರು.
ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ, ಲಕ್ಷ್ಮಣ ಬಿಜ್ಜೂರ ಮಾತನಾಡಿ, ಸಾಮೂಹಿಕ ವಿವಾಹದ ಮಹತ್ವ, ಒಗ್ಗಟ್ಟಿನಿಂದ ಆಗುವ ಪ್ರಯೋಜನಗಳ ಕುರಿತು ಅನಿಸಿಕೆ ಹಂಚಿಕೊಂಡರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಗೋವಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ, ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಾಟೀಲ, ಯಲ್ಲಪ್ಪ ಹಡಲಗೇರಿ, ಶಂಕರಗೌಡ ಪಾಟೀಲ, ರವಿ ನಾಯಕ, ಬಾಪುರಾವ ದೇಸಾಯಿ, ಬೀರಪ್ಪ ಯರಝರಿ, ವಾಲಪ್ಪ ರಾಠೋಡ, ವಿಜಯ ಚವಾಣ್, ಸಂಗಣ್ಣ ಬಿಸಲದಿನ್ನಿ, ಸಾಬಣ್ಣ ವಾಲಿಕಾರ ಇತರರಿದ್ದರು. ಶಿಕ್ಷಕ ಶರಣಗೌಡ ಕೋಳೂರ ಕಾರ್ಯಕ್ರಮ ನಿರ್ವಹಿಸಿದರು.