ಜಿಲ್ಲೆ

ಮಾರ್ಚ್ 17ಕ್ಕೆ ಉಚಿತ ಸಾಮೂಹಿಕ ವಿವಾಹ

ಮೈಸೂರು: ಡಾ.ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಸಮಿತಿ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾರ್ಚ್ 17ರಂದು ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.


ವಧುವಿಗೆ ಸೀರೆ, ಮಾಂಗಲ್ಯ, ಕಾಲುಂಗುರ ಮತ್ತು ವರನಿಗೆ ಶಲ್ಯ, ಪಂಚೆ, ಶರ್ಟ್ ನೀಡಲಾಗುವುದು.

ಕಾರ್ಯಕ್ರಮದ ಪ್ರಯೋಜನ ಪಡೆಯಲಿಚ್ಛಿಸುವವರು ಮೊ: 94825 45878 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಮಿತಿ ಅಧ್ಯಕ್ಷ ಎನ್.ರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿಯ ಸೂರ್ಯಕುಮಾರ್, ನಾಗರಾಜ್, ಸತೀಶ್‌ಕುಮಾರ್ ಆರಾಧ್ಯ, ಮಂಜುನಾಥ್ ಇದ್ದರು.