ಮೈಸೂರು: ನಗರದ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಗುರುವಾರ ಟಿ.ಕೆ ಲೇಔಟ್‌ನ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ ನಡೆಯಿತು.
ವಟುಗಳಿಗೆ ಬ್ರಹ್ಮೋಪದೇಶ ನೀಡಿದ ನಂತರ ವಟುಗಳಿಂದ ಶೋಭಾ ಯಾತ್ರೆ ಮತ್ತು ಅಶ್ವತ್ಥ ಪೂಜೆ ನೆರವೇರಿಸಲಾಯಿತು. ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ತ್ರಿಮತಸ್ಥ ವಿಪ್ರ ಸಮುದಾಯದವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನ ನಡೆಸಿಕೊಂಡು ಬರಲಾಗಿದೆ ಎಂದರು.
ವಿದ್ವಾನ್ ಸುರೇಶ್ ಭಟ್ ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ ತಿಳಿಸಿಕೊಟ್ಟರು. ಆ ನಂತರ ವಟುಗಳಿಗೆ ಮತ್ತು ಪಾಲಕರಿಗೆ ಪ್ರಸಾದ ವಿತರಿಸಲಾಯಿತು.
ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ ಮತ್ತು ಪಿ.ಎಸ್.ಶೇಖರ್, ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಪಿ.ಎಸ್. ರಮೇಶ್, ಉಪಾಧ್ಯಕ್ಷ ಪ್ರವೀಣ್, ಶ್ರೀ ಕೃಷ್ಣ ಟ್ರಸ್ಟ್ ಕಾರ್ಯದರ್ಶಿ ಕೆ.ವಿ.ಶ್ರೀಧರ್ ಹಾಗೂ ಇತರರು ಇದ್ದರು.