ಜಿಲ್ಲೆ

ಕಾನೂನು ಉಚಿತ ಸಲಹಾ ಕಾರ್ಯಕ್ರಮ

Avinash R

ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಬುಧವಾರ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನೂನು ಉಚಿತ ಸಲಹೆ ನೀಡುವ ಕಾರ್ಯಕ್ರಮ ನಡೆಯಿತು.

ಠಾಣೆಗೆ ಬರುವ ಜನಸಾಮಾನ್ಯರಿಗೆ ಕಾನೂನು ಅರಿವು, ಸಲಹೆ ಪಡೆದುಕೊಳ್ಳಲು ಪ್ರತಿ ತಿಂಗಳಲ್ಲಿ ಒಂದು ದಿನ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಳ್ಯ ನ್ಯಾಯಾಲಯದ ಪ್ಯಾನಲ್ ವಕೀಲ ಜಗದೀಶ್ ಡಿ.ಪಿ. ಕಾನೂನು ಸಲಹೆ ನೀಡಿದರು. ಹಲವಾರು ಮಂದಿ ಇದರ ಪ್ರಯೋಜನ ಪಡೆದುಕೊಂಡರು.