ಜಿಲ್ಲೆ

ಮೂತ್ರಪಿಂಡ ಉಚಿತ ತಪಾಸಣಾ ಶಿಬಿರ

ಮೈಸೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ನಗರದ ಸಿಗ್ಮಾ ಆಸ್ಪತ್ರೆ ವತಿಯಿಂದ ಮೂತ್ರಪಿಂಡ ಉಚಿತ ತಪಾಸಣಾ ಶಿಬಿರವನ್ನು ಏ.7ರಂದು ಆಯೋಜಿಸಲಾಗಿದೆ.


ಸಿಗ್ಮಾ ಆಸ್ಪತ್ರೆ ವತಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈ ಶಿಬಿರವನ್ನು ಏರ್ಪಡಿಸಲಾಗಿದೆ. ಕಿಡ್ನಿ ಸಮಸ್ಯೆ ಹೆಚ್ಚುತ್ತಿದ್ದು, ಶೇ.13ರಷ್ಟು ಜನರು ಮೂತ್ರಪಿಂಡ ರೋಗ ಪೀಡಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏ.7ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಮೂತ್ರಪಿಂಡ ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ. ಮಾದಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು..


ಶಿಬಿರದಲ್ಲಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಪರೀಕ್ಷೆ, ಮೂತ್ರ ಅಲ್ಬುಮಿನ್ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆ ಮಾಡಲಾಗುವುದು. ಅಗತ್ಯವಿರುವ ಯಾವುದೇ ಹೆಚ್ಚಿನ ಪರೀಕ್ಷೆಗಳಿಗೆ ಮುಂದಿನ ಒಂದು ತಿಂಗಳಿಗೆ ಶೇ.15ರಷ್ಟು ರಿಯಾಯಿತಿ ಇದೆ ಎಂದು ತಿಳಿಸಿದರು. ಮೂತ್ರರೋಗ ಶಾಸ್ತ್ರಜ್ಞ ಡಾ.ಅನಿಕೇತ್ ಪ್ರಭಾಕರ್ ಇದ್ದರು.