ಜಿಲ್ಲೆ

ಮಾನವೀಯ ಗುಣದ ಸೇವೆ ಸಾರ್ಥಕ : ಟಿ.ಜಿ.ರಾಜಾರಾಮ ಭಟ್ ಶ್ಲಾಘನೆ

ಸೌಮ್ಯ ಆರ್

ಉಳ್ಳಾಲ: ಹುಟ್ಟುಹಬ್ಬ ಪ್ರಯುಕ್ತ ಕೆಲವು ಕಡೆ ಕೇಕ್ ತುಂಡರಿಸಿ ದಂಪತಿಯೇ ತಿನ್ನುತ್ತಾರೆ, ಕೆಲವೆಡೆ ಕಾರ್ಯಕ್ರಮ ಮಾಡುತ್ತಾರೆ. ಆದರೆ ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುವ ಮಾನವೀಯ ಗುಣದ ಸೇವೆ ಸಾರ್ಥಕ ಎಂದು ಕೈರಂಗಳ ಪುಣ್ಯಕೋಟಿನಗರ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಶ್ಲಾಘಿಸಿದರು.

ಮೈಸೂರು ಇಲೆಕ್ಟ್ರಿಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ವತಿಯಿಂದ ಅಸೈಗೋಳಿ ಅಭಯಾಶ್ರಮದಲ್ಲಿ ನಡೆದ ಅನ್ನದಾನ ಸೇವೆ, ಎರಡು ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೋವಿ ಸಮಾಜದ ದರ್ಶನ ಪಾತ್ರಿ ರವೀಂದ್ರ ಬೆಳ್ಚಪ್ಪಾಡ ಮತ್ತು ಕುಲಾಲ ಸಮಾಜದ ರುಕ್ಮಯ ಕುಲಾಲ್ ಕುರ್ನಾಡು ಅವರಿಗೆ ನಿರ್ಮಿಸಲಾಗುವ ನೂತನ ಮನೆಗಳ ನೀಲಿನಕ್ಷೆ ಬಿಡುಗಡೆಗೊಳಿಸಲಾಯಿತು.

ಅಭಯ ಆಶ್ರಮ ಸಂಚಾಲಕ ಶ್ರೀನಾಥ್ ಹೆಗ್ಡೆ, ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಇನೋಳಿ ದೇವಂದಬೆಟ್ಟು ಶ್ರೀ ಸೋಮನಾಥ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್ ಉಪಸ್ಥಿತರಿದ್ದರು.

ರವಿ ರೈ ಪಜೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಣ, ಬದುಕು ಶಾಶ್ವತವಲ್ಲ, ಜನರ ಪ್ರೀತಿ ಶಾಶ್ವತ. ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಸಮಾಜ ಒಂದಲ್ಲ ಒಂದು ದಿನ ನಮ್ಮನ್ನು ಗುರುತಿಸುತ್ತದೆ. ಜೀವಮಾನದಲ್ಲಿ ಯಾರಿಗೆ ಮನೆ ನಿರ್ಮಿಸಲು ಸಾಧ್ಯವಿಲ್ಲವೋ ಅಂಥವರಿಗೆ ಮನೆ ನಿರ್ಮಿಸಿಕೊಡುವಾಗ ಸಿಗುವ ಸಂತೋಷ, ನೆಮ್ಮದಿಯೇ ಬೇರೆ. ಸಂತೋಷ್ ಕುಮಾರ್ ರೈ ಬೋಳಿಯಾರ್ ಮೈಸೂರು ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ https://www.vijayavani.net/daivi-vana-management-problem