ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಸೇಡಂ ರಸ್ತೆಯಲ್ಲಿರುವ ಓಂ ನಗರದ ಅರವಿಂದ ಆಶ್ರಮದಲ್ಲಿ ಅ.೮ ರಂದು ಬೆಳಗ್ಗೆ ೧೦ರಿಂದ ಮಧ್ಯಾಹ್ನದವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು e್ಞÁನ ಗಾಯತ್ರಿ ಸೇವಾ ಪ್ರತಿಷ್ಠಾನ ಅಧ್ಯಕ್ಷರಾದ ಸಮಾಜ ಸೇವಕಿ ನರ್ಮದಾ ರೆಡ್ಡಿ ತಿಳಿಸಿದರು.
ಪ್ರತಿಷ್ಠಾನದ ದಶತಮಾನೋತ್ಸವ ಸಂಭ್ರಮದಲ್ಲಿದ್ದು ಅದರಂಗವಾಗಿ ಜನರಲ್ಲಿ ಆರೋಗ್ಯ ಕಾಳಜಿ ಮೂಡಿಸುವುದರ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಪರಿಣಿತÀ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿ ಸಲಹೆ ನೀಡುವರು. ಹೀಗಾಗಿ ಈ ಶಿಬಿರದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸೀರೋಗ ತಜ್ಞ ಡಾ.ಉಮಾ ರಾಜಾಪುರ, ಎಲುಬು ಮತ್ತು ಕೀಲು ತಜ್ಞ ಡಾ.ಈಶ್ವರ, ಚರ್ಮ ರೋಗ ತಜ್ಞ ಡಾ.ಸುಮಾ ಪಾಟೀಲï, ಡಾ.ಸ್ವರೂಪಾ ಪಾಟೀಲï, ಜನರಲï ಮೆಡಿಸಿನ್ ಪರಿಣಿತ ಡಾ.ಹರ್ಷವರ್ಧನ ರೆಡ್ಡಿ ಮತ್ತು ಡಾ.ರಾಜವರ್ಧನ ರೆಡ್ಡಿ, ದಂತ ವೈದ್ಯರು ಸೇರಿದಂತೆ ಅನೇಕ ವೈದ್ಯರು ಪಾಲ್ಗೊಳ್ಳುವರು. ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್‌ನ ಡಾ.ಜಯಶ್ರೀ ಮತಾಡ್ ಅವರು ಶಿಬಿರದಲ್ಲಿ ಆರೋಗ್ಯ ಪರೀಕ್ಷ ಮಾಡುವರು. ಕಲಬುರಗಿ ನಗರ ಹಾಗೂ ಸುತ್ತಲಿನ ಹಳ್ಳಿಗಳ ಜನರು ಇದರ ಲಾಭ ಪಡೆದುಕೊಳ್ಳುವಂತೆ ನರ್ಮದಾರೆಡ್ಡಿ ತಿಳಿಸಿದರು. ಮಾಹಿತಿಗೆ ಮೊ.೯೯೮೬೧೭೦೬೩೨ಕ್ಕೆ ಸಂಪರ್ಕಿಸಬಹುದು ಎಂದು ಹೇಳಿದರು.