ಜಿಲ್ಲೆ

ಸಿದ್ದಗಂಗೆಯ 10 ಸಾವಿರ ಮಕ್ಕಳ ಆರೋಗ್ಯ ತಪಾಸಣೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಶ್ರೀಸಿದ್ಧಗಂಗಾ ಮಠದ ಮಕ್ಕಳ ಆರೋಗ್ಯ ಕಾಳಜಿಗಾಗಿ ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶುಕ್ರವಾರಕ್ಕೆ ಸಂಪನ್ನವಾಯಿತು. 10 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.

ಆ.5 ರಿಂದ ಆರಂಭವಾದ ಶಿಬಿರಕ್ಕೆ ಹಿರಿಯ ಕಲಾವಿದ ದೊಡ್ಡಣ್ಣ, ನಿವೃತ್ತ ಸಹಾಯಕ ಔಷಧ ನಿಯಂತ್ರಕ ಗೋಣಿ ಪಕೀರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಮೈಕ್ರೋಲ್ಯಾಬ್ಸ್​, ಬಿಡದಿ ಕೆಮಿಸ್ಟ್​ ಅಂಡ್​ ಡ್ರಗ್ಗಿಸ್ಟ್​ ಫೌಂಡೇಫಿನ್​ ಟ್ರಸ್ಟ್​,ಗೂರ್ಬಸ್​, ಜೈನ್​ ಡಿಸ್ಟಿಬ್ಯೂರ್ಟಸ್​ ಸೇರಿದಂತೆ 10 ಕ್ಕೂ ಹೆಚ್ಚು ಔಷಧ ಸಂಸ್ಥೆಗಳ ಸಹಯೋಗ ನೀಡಿದ್ದು ನಗರದ ಶ್ರೀದೇವಿ ಹಾಗೂ ಸಿದ್ಧಾರ್ಥ ವೈದ್ಯಕಿಯ ಕಾಲೇಜು, ಶಂಕರ್​ ಕಣ್ಣಿನ ಆಸ್ಪತ್ರೆ, ದಯಾನಂದ ಸಾಗರ್​ ದಂತ ವೈದ್ಯಕಿಯ ಕಾಲೇಜುಗಳು ಸಹ ಕೈ ಜೋಡಿಸಿದ್ದರು.

ಸಹಜವಾಗಿ ಮಳೆಗಾಲದ ಸಂದರ್ಭದಲ್ಲಿ ಮಕ್ಕಳಿಗೆ ಕಾಡುವ ಜ್ವರ, ಚರ್ಮದ ಸಮಸ್ಯೆ, ದಂತದ ಸಮಸ್ಯೆ, ಕೆಮ್ಮು, ಕಣ್ಣು ಮುಂತಾದ ಆರೋಗ್ಯ ಸಮಸ್ಯೆಗಳಿಗೆ 80 ಕ್ಕೂ ಹೆಚ್ಚು ವೈದ್ಯರು, 150 ಕ್ಕೂ ಹೆಚ್ಚು ವೈದ್ಯಕಿಯ ಸಿಬ್ಬಂದಿ ವಿವಿಧ ವಿಭಾಗದ ಅಡಿಯಲ್ಲಿ 10 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ವಿವಿಧ ಆರೋಗ್ಯ ಸಮಸ್ಯೆಯುಳ್ಳ 300ಕ್ಕೂ ಹೆಚ್ಚು ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಸಿದ್ಧಗಂಗಾ ವೈದ್ಯಕಿಯ ಕಾಲೇಜಿಗೆ ಶಿಾರಸು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನು ಸ್ಥಳದಲ್ಲಿಯೇ ನೀಡಲಾಗಿದ್ದು ಉಳಿದಂತೆ ಎಲ್ಲಾ ಮಕ್ಕಳಿಗೂ ಜಂತುಹುಳು ಬಾಧೆ ನಿರ್ವಹಣೆಗೆ ಸಿರಪ್​ ಹಾಗೂ 20 ಲಕ್ಷ ರೂ. ಮೌಲ್ಯದ ಪ್ರಾಥಮಿಕ ಔಷಧ ನೀಡಲಾಯಿತು.

ಸಿದ್ಧಗಂಗಾ ವೈದ್ಯಕಿಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್​.ಸಚ್ಚಿದಾನಂದ್​, ನಿರ್ದೇಶಕ ಡಾ.ಎಸ್​.ಪರಮೇಶ್​, ಪ್ರಾಛಾರ್ಯರಾದ ಡಾ.ಶಾಲಿನಿ, ವೈದ್ಯಕಿಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸಿದ್ಧಗಂಗಾ ಆಸ್ಪತ್ರೆಯ ಸಿಇಒ ಡಾ.ಸಂಜೀವ್​ ಕುಮಾರ್​, ಸಿದ್ಧಗಂಗಾ ಆಸ್ಪತ್ರೆ ನರ್ಸಿಂಗ್​ ವಿಭಾಗದ ಮುಖ್ಯಸ್ಥ ನಾಗಣ್ಣ, ಮಂಜುನಾಥ್​, ಈಶ್ವರ್​, ಕಾಂತರಾಜು ಮತ್ತಿತರರು ಇದ್ದರು.

== ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಆಗುವವರು, ಡಾ.ಶಿವಕುಮಾರ ಸ್ವಾಮೀಜಿ ಅಂತ@ಕರಣದ ರೂಪವಾಗಿ ಆರಂಭವಾದ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಹಕಾರ ನೀಡುತ್ತಿರುವ ನಟ ದೊಡ್ಡಣ್ಣ, ಗೋಣಿಪಕೀರಪ್ಪ, ಮೈಕ್ರೋಲ್ಯಾಬ್ಸ್​ ಹಾಗೂ ಮಂಜುನಾಥ್​ ಅವರನ್ನು ಶ್ರೀಮಠ ಸ್ಮರಿಸಿಕೊಳ್ಳುತ್ತದೆ, ಮಕ್ಕಳ ಆರೋಗ್ಯ ಕಾಳಜಿಗಾಗಿ ಮಿಡಿದ ಎಲ್ಲರಿಗೂ ಸಿದ್ಧಗಂಗಾ ಮಠ ಕೃತಜ್ಞತೆ ಸಲ್ಲಿಸುತ್ತದೆ. ಶ್ರೀಸಿದ್ಧಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷರು