ಸಿದ್ದಾಪುರ: ಆಧಾರ ಸಂಸ್ಥೆ ಸಿದ್ದಾಪುರ, ಒಮೇಗಾ ಆಸ್ಪತ್ರೆ ಮಂಗಳೂರು ಹಾಗೂ ಮಂಗಳೂರು ಹಾರ್ಟ್ ಸ್ಕಾ್ಯನ್ ಫೌಂಡೇಷನ್ ಆಶ್ರಯದಲ್ಲಿ ದಿ. ಡಿ.ಎನ್. ಶೇಟ್ ಸ್ಮರಣಾರ್ಥ ಬೃಹತ್ ಉಚಿತ ಹೃದಯ ತಪಾಸಣೆ ಶಿಬಿರವನ್ನು ಸಿದ್ದಾಪುರ ಬಾಲಿಕೊಪ್ಪದ ಎಂಎಚ್ಪಿಎಸ್ ಶಾಲೆಯಲ್ಲಿ ಫೆ. 16ರಂದು ಬೆಳಗ್ಗೆ 9.30ಕ್ಕೆ ಏರ್ಪಾಟಾಗಿದೆ.
ಶಾಸಕ ಭೀಮಣ್ಣ ನಾಯ್ಕ ಶಿಬಿರ ಉದ್ಘಾಟಿಸುವರು. ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ.ವಿ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಹೃದಯರೋಗ ತಜ್ಞ ಡಾ.ಕೆ. ಮುಕುಂದ್, ಡಾ.ಅಮಿತ್ ಕಿರಣ, ಡಾ.ಮೇಘನಾ ಮುಕುಂದ, ವಿಠ್ಠಲ ಎನ್. ಶೇಟ್ ಬೆಂಗಳೂರು, ಇತರರು ಉಪಸ್ಥಿತರಿರುವರು.
ಆಧಾರ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.