ಅಥಣಿ: ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 78ನೇ ಜನ್ಮದಿನದ ಪ್ರಯುಕ್ತ ಆ.1ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಚಿಕ್ಕೋಡಿ ತಾಲೂಕಿನ ಅಂಕಲಿಯ ಶ್ರೀಮತಿ ಶಾರದಾದೇವಿ ಕೋರೆ ಕಾಲೇಜು ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ ಚಿಕಿತ್ಸೆ, ರಕ್ತದಾನ ಶಿಬಿರ ಜರುಗಲಿದೆ ಎಂದು ಅಥಣಿ ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯ ಕೆಎಲ್ಇ ವೈದ್ಯಕಿಯ ಸಂಶೋಧನಾ ಕೇಂದ್ರ ಮತ್ತು ಚಿಕ್ಕೋಡಿ ಕಾಹೆರ್ ಹಾಗೂ ಜವಾಹರಲಾಲ್ ನೆಹರು ವೈದ್ಯಕಿಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಕೆಎಲ್ಇ ತ ವೈದ್ಯರು ಪಾಲ್ಗೊಂಡು ಹೃದಯ ರೋಗ, ಹೃದಯ ಶಸಚಿಕಿತ್ಸೆ (ಅಂಗಾಂಗ ಕಸಿ ಜೋಡಣೆ) ಮೂತ್ರಕೋಶ, ಮೂತ್ರಪಿಂಡ ಚಿಕಿತ್ಸೆ (ಅಂಗಾಂಗ ಕಸಿ ಜೋಡಣೆ) ಗ್ಯಾಸ್ಕೋ ಎಂಟಿರೊಲೊಜಿ, ಗ್ಯಾಸ್ಕೋ ಸರ್ಜರಿ, ಮಧುಮೇಹ ಎಂಡೊಕೆನೊಲಜಿ, ನೇತ್ರ ಶಸಚಿಕಿತ್ಸೆ, ಶ್ವಾಸಕೋಶ, ಚಿಕ್ಕ ಮಕ್ಕಳ ಚಿಕಿತ್ಸೆ, ಎಲುಬು&ಕೀಲು ಮರುಜೋಡಣೆ, ಕಿವಿ, ಮೂಗು ಮತ್ತು ಗಂಟಲು, ಕಾನ್ಸರ್ ರೋಗ ಚಿಕಿತ್ಸೆ, ಸ್ತೀರೋಗ ಚಿಕಿತ್ಸೆ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ದಂತರೋಗ ಚಿಕಿತ್ಸೆ, ಮನೋರೋಗ ಚಿಕಿತ್ಸೆ, ಭೌತಿಕ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ, ಹೋಮಿಯೋಪತಿಕ್ ಚಿಕಿತ್ಸೆಯೊಂದಿಗೆ ಎಂಜೊಗ್ರಾಮ್, ಎಂಜಿಯೊಪ್ಲಾಸ್ಟಿ, ಹೃದಯ ಬೈಪಾಸ್ ಸರ್ಜರಿ ಸೇರಿ ಶುಗರ್ ಮತ್ತು ಹಿಮೋಗ್ಲೋಬಿನ್, ಬಿಪಿ, ಇಸಿಜಿ, ಇಕೋ ತಪಾಸಣೆ ನಡೆಸಲಾಗುವುದು. ಉಚಿತ ಔಷಧ ವಿತರಣೆಯು ಇರುವುದು. ಪೂರ್ವ ನೋಂದಣಿ ಮಾಡಿಸಿದ ರೋಗಿಗಳಿಗೆ ಉಚಿತ ಬಸ್ ಮೂಲಕ ಅಂಕಲಿಗೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.