ಜಿಲ್ಲೆ

11 ರಿಂದ 18ರವರೆಗೆ ಆರೋಗ್ಯ ಉಚಿತ ತಪಾಸಣೆ

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದಿಂದ ಸೆ. 11 ರಿಂದ ಸೆ. 18 ರ ವರೆಗೆ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.ಶಿಬಿರದಲ್ಲಿ ಕತ್ತು ಮತ್ತು ಭುಜನೋವು, ಭುಜ ಹಿಡಿಯುವುದು, ಭುಜ ಎತ್ತುವಲ್ಲಿ ಅಶಕ್ತ, ಕೀಲುಗಳಲ್ಲಿ ನೋವು, ಹಿಡಿತ, ಊತ ರೋಗ, ಕೀಲುಗಳಲ್ಲಿ ನೋವು, ಸಂಧಿಗಳ ನೋವು ಹಾಗೂ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಸೇರಿ ವಿವಿಧ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ನೀಡಲಾಗುವುದು.

ಸೆ. 11 ರಂದು ದೇಶದ ಪ್ರತಿಷ್ಠಿತ ಆಯುರ್ವೇದ ಸಂಸ್ಥೆ ಝಂಡು ಹೆಲ್ತಕೇರ್​ ಸಹಯೋಗದಲ್ಲಿ ಮೊದಲಿಗೆ ಬರುವ 100 ಜನರಿಗೆ ವಿಶೇಷವಾಗಿ ಮೂಳೆಗಳ ಸಾಂಧ್ರತೆ ಮಾಪನ ಯಂತ್ರದಿಂದ ಉಚಿತ ತಪಾಸಣೆ ಮಾಡಲಾಗುವುದು. ಮಾಹಿತಿಗೆ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯಕ್ಕೆ ಸಂಪರ್ಕಿಸುವಂತೆ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.