ತೇರದಾಳ: ಆಯುರ್ವೇದ ನಮ್ಮ ದೇಶದ ಪ್ರತಿಬಿಂಬವಾಗಿದೆ. ಆರೋಗ್ಯದಲ್ಲಿ ಏನಾದರೂ ಸಣ್ಣಪುಟ್ಟ ಕಾಯಿಲೆಗಳು ಕಂಡು ಬಂದರೆ ಮನೆ ಮದ್ದಿಗೆ ಮೊದಲ ಆದ್ಯತೆ ನೀಡಿ ಎಂದು ಇಲ್ಲಿನ ಜೆವಿ ಮಂಡಳ ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ. ಲಿಂಗಾರೆಡ್ಡಿ ಬಿರಾದಾರ ಹೇಳಿದರು.
ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಸೇವಿಸುವ ಆಹಾರ ಮತ್ತು ಆಹಾರ ಪದ್ಧತಿ ಮೇಲೆ ನಮ್ಮ ಆರೋಗ್ಯ ಇರುತ್ತದೆ. ಆದ್ದರಿಂದ ಪೌಷ್ಟಿಕ ಆಹಾರ ಸೇವಿಸಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.
ಡಾ. ಶೀತಲ ಸದಲಗಿ, ಡಾ. ಆನಂದ ಕೆ., ಡಾ. ಸಂಪೂರ್ಣ ಕುಲ್ಲೂರ, ಡಾ. ಬಕೀಂ ಜಂಬಗಿ, ಡಾ. ಸೌಭಾಗ್ಯ ಮಠಪತಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.