ಜಿಲ್ಲೆ

ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಚಿಕಿತ್ಸೆ: ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ ಸಲಹೆ

ಸೌಮ್ಯ ಆರ್

ಮೂಡುಬಿದಿರೆ: ಇಂದಿನ ಆಧುನಿಕ ಕಾಲಘಟ್ಟದಲ್ಲಿ ಆರೋಗ್ಯ ಸಮಸ್ಯೆ ಸಾಮಾನ್ಯಮಾಗಿದೆ. ಕಾಲಕ್ಕೆ ಅನುಗುಣಮಾಗಿ ಆರೋಗ್ಯ ತಪಾಸಣೆ, ಆರೋಗ್ಯ ಸಮಸ್ಯೆಗಳಿದ್ದಲ್ಲಿ ಚಿಕಿತ್ಸೆ ಪಡೆಯುವುದು ಬಹುಮುಖ್ಯ. ಆರೋಗ್ಯ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ ಹೇಳಿದರು.

ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ಆಶ್ರಯದಲ್ಲಿ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಝುಲೇಖ ಯೆನೆಪೋಯ ಗ್ರಂಥಿ ಸಂಸ್ಥೆ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಸಮಾಜ ಮಂದಿರದಲ್ಲಿ ಭಾನುಮಾರ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯ ಸಂಸ್ಥಾಪಕ, ಅಧ್ಯಕ್ಷ ವರ್ತೂರ್ ಮಂಜುನಾಥ ಅಧ್ಯಕ್ಷತೆ ವಹಿಸಿದರು. ಯೆನೆಪೋಯ ಸಂಸ್ಥೆಯ ಡಾ.ಅಬ್ದುಲ್ ಅಝೀಜ್, ಸಂಘಟನೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಪ್ರವೀಣ್, ಉಡುಪಿ ಜಿಲ್ಲಾಧ್ಯಕ್ಷ ರಾಜೇಶ್, ಪ್ರಮುಖರಾದ ಶೇಖರ್ ನೆತ್ತೋಡಿ, ಸುನಿಲ್, ಶ್ವೇತಾ ಗಂಟಾಲ್ಕಟ್ಟೆ, ಮೂಡುಬಿದಿರೆ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.