ಜಿಲ್ಲೆ

ಉತ್ತಮ ಆರೋಗ್ಯ ಸಾಧನೆಗೆ ಸಹಕಾರಿ : ಡಾ.ಮೋಹನ ಆಳ್ವ ಹೇಳಿಕೆ

ಸೌಮ್ಯ ಆರ್

ಮೂಡುಬಿದಿರೆ: ಜಿಲ್ಲೆಯಲ್ಲಿ ಅಲ್ಲಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿರುವುದರಿಂದ ಜನರಿಗೆ ಮೊದಲ ಹಂತದಲ್ಲಿ ಆರೋಗ್ಯದ ಸಮಸ್ಯೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯವಿದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹಿಂದಿನ ಚಿಕಿತ್ಸಾ ಪದ್ಧತಿ ಹಾಗೂ ಈಗಿನ ಚಿಕಿತ್ಸಾ ಪದ್ಧತಿಗೆ ಬಹಳಷ್ಟು ವ್ಯತ್ಯಾಸವಿದೆ. ಇಂದು ತಂತ್ರಜ್ಞಾನಗಳಿಂದಾಗಿ ಯಾವುದೇ ರೋಗಗಳನ್ನು ತಕ್ಷಣ ಕಂಡು ಹಿಡಿದು, ಚಿಕಿತ್ಸೆ ನೀಡಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.

ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ಮೂಡುಬಿದಿರೆ ತಾಲೂಕು, ಬಂಟರ ಸಂಘ ಮಹಿಳಾ ಘಟಕ, ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಯುಷ್ ಆಸ್ಪತ್ರೆ ವಿದ್ಯಾಗಿರಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ದ.ಕ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ.ಹನಾ ಶೆಟ್ಟಿ ಆರೋಗ್ಯ ಮಾಹಿತಿ ನೀಡಿದರು. ಮೂಡುಬಿದಿರೆ ಬಂಟರ ಸಂಘ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ತಾಲೂಕು ಮುಖ್ಯ ನಿರ್ವಾಹಣಾಧಿಕಾರಿ ಬಿ.ಕುಸುಮಾಧರ, ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಶುಭಾ, ಕಾತ್ಯಾಯಿನಿ, ಮೆಸ್ಕಾಂ ಎಡಬ್ಲುೃ ಮೋಹನ ಇರುವೈಲ್, ಕೆಎಸ್‌ಆರ್‌ಟಿ, ಆಹಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜೈಸನ್ ಪಿರೇರಾ ಸ್ವಾಗತಿಸಿದರು. ರಾಜೇಶ್ ಕಡಲಕೆರೆ ನಿರೂಪಿಸಿದರು. ಕ್ಲಾರಿಯೊ ವಂದಿಸಿದರು. ಸಾಮಾನ್ಯ ವೈದ್ಯಕೀಯ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಎಲುಬು ಮತ್ತು ನರರೋಗ ತಜ್ಞರು ಭಾಗವಹಿಸಿದ್ದರು.

ಮಹಿಳೆಯರಿಗೆ ವಿಶೇಷವಾಗಿ ಆದ್ಯತೆ ನೀಡಿ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವುದು ಮುಖ್ಯ. ಆರೋಗ್ಯವಂತ ಮಹಿಳೆಯಿಂದಾಗಿ ಇಡೀ ಕುಟುಂಬ ಆರೋಗ್ಯವಾಗಿರಲು ಸಾಧ್ಯ. ಭರತ್ ಮುಂಡೋಡಿ, ಜಿಲ್ಲಾಧ್ಯಕ್ಷ ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ದ.ಕ