ರಾಯಚೂರು ನಗರದ ಮಹಾತ್ಮಗಾಂಽÃ ಕ್ರೀಡಾಂಗಣದಲ್ಲಿ ಏ. ೧೩ ರಂದು ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಶುಶ್ರೂತ್ ನಿಲೋ-Àರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೀವ ಗಾಂಽ ಸೂಪರ ಸ್ಪೇಷಾಲಿಟಿ ಆಸ್ಪತ್ರೆ, ನವೋದಯ ವೈಧ್ಯಕೀಯ ಕಾಲೇಜು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಅಂದು ಬೆಳಿಗ್ಗೆ ೭ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಆರೋಗ್ಯ ಶಿಬಿರ ನಡೆಯಲಿದೆ.
ಸಾಮಾನ್ಯ ಆರೋಗ್ಯ, ಶಸö ಚಿಕಿತ್ಸಾ, ಇಸಿಜಿ, ಇಕೋ ತಪಾಸಣೆ, ಮೂಳೆ, ಕೀಲು ಚಿಕಿತ್ಸೆ, ನೇತ್ರ, ಮನೋವೈದ್ಯ, ಚರ್ಮರೋಗ, ಕಿವಿ,ಮೂಗು, ಗಂಟಲು, ಮಕ್ಕಳ ತಪಾಸಣೆ ಮೂತ್ರ , ಮೂತ್ರಪಿಂಡ, ಹೃದಯ ರೋಗ, ನರರೋಗ, ಪಾಸ್ಟೀಕ್ ಶಸö ಚಿಕಿತ್ಸೆ ವಿಭಾಗಗಳ ವೈಧ್ಯರು ತಪಾಸಣಡೆ ನಡೆಸಲಿದ್ದಾರೆ. ಅಗತ್ಯ ಬಿದ್ದರೆ ರಾಜೀವಗಾಂಽ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಶಸö ಚಿಕಿತ್ಸೆ ನಡೆಸಲಾಗುತ್ತದೆ. ಉಚಿತವಾಗಿ ಔಷಽಯೂ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಶೈಲ ಅಮರಖೇಡ್,ಪದಾಽಕಾರಿಗಳಾದ ಡಾ.ಶ್ರೀಧರ ವೈಟ್ಲ, ಡಾ.ರಾಘವೇಂದ್ರ. ಎಸ್, ಡಾ.ದೀಪಶ್ರೀ, ಡಾ.ರಾಮನಗೌಡ ಇದ್ದರು.