ಜಿಲ್ಲೆ

ಕಾನ್‌ಬೈಲ್ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ

ಮಡಿಕೇರಿ:

ಸೇವಾ ಭಾರತಿ ಕೊಡಗು, ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊಡಗು ಮತ್ತು ಎನ್ ಎಂ ಓ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಆಶ್ರಯದಲ್ಲಿ ಕಾನ್‌ಬೈಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಕಾರ್ಯಕ್ರಮ ನಡೆಯಿತು.

ಶಿಬಿರದಲ್ಲಿ ಕಾನ್‌ಬೈಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 126 ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಎಲ್ಲರನ್ನೂ ಉಚಿತವಾಗಿ ತಪಾಸಣೆ ಮಾಡಿ ಅವಶ್ಯಕತೆ ಇದ್ದವರಿಗೆ ಉಚಿತ ಔಷಧಿ ವಿತರಿಸಲಾಯಿತು.

ಸೇವಾ ಭಾರತಿ ಕೊಡಗು ಅಧ್ಯಕ್ಷ ಟಿ.ಸಿ.ಚಂದ್ರನ್, ಕಾರ್ಯದರ್ಶಿ ಡಿ.ಎಚ್. ತಮ್ಮಪ್ಪ ನೇತೃತ್ವದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಶಶಾಂಕ ಎಂ.ಜೆ, ಡಾ.ಚಿತ್ರಾ, ಡಾ. ಗಗನ ವಿ, ಡಾ. ಸುಷ್ಮಿತಾ, ಡಾ. ಹೆಚ್. ಹರಿನಾರಾಯಣ, ಡಾ. ಪವನ್ ಪವಾರ್, ಡಾ. ಪ್ರಫುಲ್ ಎಸ್.ವಿ, ಡಾ. ಜ್ಯೋತಿ ಪಿ.ವಿ, ಡಾ. ಮನೀಷಾ ದೇವಿ, ಡಾ. ದಿಶಾ ರಘುನಾಥ್, ಡಾ. ಹರ್ಷ, ಡಾ. ಲೋಹಿತ್ ಎಂ.ಎಸ್, ಫಾರ್ಮಾಶಿಸ್ಟ್ ಆಶೀಕ್ ಅಯ್ಯಪ್ಪ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ಶಿಬಿರವನ್ನು ನಡೆಸಿಕೊಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಧ ಮತ್ತು ಇತರರು ಸಹಕಾರ ನೀಡಿದರು.