ವಿಜಯಪುರ: ದೇಶದ 76ನೇ ಸ್ವಾತಂತ್ರ್ಯ ಉತ್ಸವ ಹಿನ್ನೆಲೆ ಸವಿತಾ ಸಮಾಜ ಸಂಘದಿಂದ ಅಂಧ, ಅನಾಥ ಮಕ್ಕಳಿಗೆ ಉಚಿತವಾಗಿ ಕ್ಷೌರ (ಹೇರ್ ಕಟಿಂಗ್) ಸೇವಾ ಕಾರ್ಯಕ್ರಮ ನೀಡಲಾಯಿತು.
ನಗರದಲ್ಲಿ ಸೋಮವಾರ ಅಂಧ ಹಾಗೂ ಅನಾಥ ಮಕ್ಕಳನ್ನು ಕರೆತಂದು ಕ್ಷೌರ ಮಾಡಲಾಯಿತು. ಮೂಲಕ ಸ್ವಾತಂತ್ರ್ಯ ಉತ್ಸವ ಹಾಗೂ ಸವಿತಾ ಸಮಾಜದ 25ನೇ ರಜತ ಮಹೋತ್ಸವಕ್ಕೆ ಆಹ್ವಾನ ನೀಡಲಾಯಿತು.
ಇದನ್ನೂ ಓದಿ : ಗ್ರಾಪಂ ಮಟ್ಟದಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನ
ಸೆ. 5ರಂದು ಸವಿತಾ ಸಮಾಜದ ರಜತ ಮಹೋತ್ಸವ ಇದ್ದು ಈ ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಭಾಗವಹಿಸಲಿದ್ದಾರೆ. ತನ್ನಿಮಿತ್ತ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಕ್ಷೌರ ಸೇವಾ ಕಾರ್ಯಕ್ರಮ ಆಯೋಜಿಸಿದ್ದಾಗಿ ಸಂಘದ ಜಿಲ್ಲಾಧ್ಯಕ್ಷ ಗುರುರಾಜ ಪಂಚಲಿಂಗ ತಿಳಿಸಿದರು.
ನಗರ ಅಧಕ್ಷ ರಾಜಕುಮಾರ ಬಳ್ಳಾರಿ, ಸದಸ್ಯರಾದ ಮಂಜುನಾಥ ಗುರುಜಾಲ, ನೀಲೇಶ ಶಹಾಪೂರ, ತಿಮ್ಮಯ್ಯ ಗುರುಜಾಲಕರ, ಹಣಮಂತ ನಾಗಲದಿನ್ನಿ, ಮಹಾಂತೇಶ ಗುರುಜಾಲಕರ, ಮಹೇಶ ಗುರುಜಾಲಕರ, ರಂಜಿತ ಗುರುಜಾಲಕರ ಮತ್ತಿತರರಿದ್ದರು.