ಜಿಲ್ಲೆ

ಸಹಕಾರದಿಂದ ಬಡ ರೋಗಿಗಳಲ್ಲಿ ಮಾನಸಿಕ ಸ್ಥೈರ್ಯ

ಡಾ. ಎಚ್​.ಅಶೋಕ್​ ಅಭಿಪ್ರಾಯ

ಆಹಾರದ ಕಿಟ್​ ಉಚಿತ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುವುದರಿಂದ ಬಡ ಕ್ಷಯ ರೋಗಿಗಳಿಗೆ ಸಹಾಯವಾಗತ್ತದೆ. ಅಲ್ಲದೆ, ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದಂತಾಗುತ್ತದೆ. ಈ ಕಾರ್ಯದಿಂದ ಇತರರಿಗೂ ಸಹಾಯ ಮಾಡಲು ಪ್ರೇರಣೆ ಲಭಿಸುತ್ತದೆ ಎಂದು ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ಅಭಿಪ್ರಾಯಪಟ್ಟರು.

ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ನಿಮಿತ್ತ ಎಂಸಿಕೆಎಸ್​ ಫುಡ್​ ಫಾರ್​ ದಿ ಹಂಗ್ರಿ ಫೌಂಡೇಷನ್​ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಕ್ಷಯ ರೋಗಿಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಹಾಗೂ ಸಿರಿಧಾನ್ಯ ಸೇರಿದಂತೆ ದಿನನಿತ್ಯ ಬಳಸುವ ವಿವಿಧ ಅಡುಗೆ ಪದಾರ್ಥಗಳ ಹಾಗೂ ಆಹಾರದ ಕಿಟ್​ ವಿತರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ ಎಸ್​., ಎಂಸಿಕೆಎಸ್​ ಮುಖ್ಯಸ್ಥೆ ನಿಧಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಎಲ್ಲ ಕಾರ್ಯವನ್ನೂ ಸರ್ಕಾರ ಮಾತ್ರ ಮಾಡಬೇಕು ಎಂದು ಬಯಸುವುದು ಸೂಕ್ತವಲ್ಲ. ಸಂಘ-ಸಂಸ್ಥೆಗಳೂ ಸಹ ಇಂತಹ ಮಾನವೀಯ ಕಾರ್ಯದಲ್ಲಿ ಸಹಕಾರ ನೀಡಿದರೆ ಕ್ಷಯ ರೋಗವನ್ನು ಸಂಪೂರ್ಣ ನಿಮೂರ್ಲನೆ ಮಾಡಲು ಸಾಧ್ಯ. | ಡಾ. ಎಚ್​.ಅಶೋಕ್​. ಉಡುಪಿ ಜಿಲ್ಲಾ ಸರ್ಜನ್​.