ಬನ್ನೂರಿನಲ್ಲಿ ಶನಿವಾರ ನೇತ್ರ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಎಂ.ಪ್ರಕಾಶ್, ಡಾ.ಮಹೇಂದ್ರಸಿಂಗ್ ಕಾಳಪ್ಪ, ಕೆ.ರಾಜೇಶ್‌ಕುಮಾರ್, ಬಸವನಹಳ್ಳಿ ವೆಂಕಟೇಶ್, ಸಿ.ರಾಜು, ಯೋಗೇಂದ್ರ, ಪಾರ್ಥಸಾರಥಿ, ಹನುಮಂತೇಗೌಡ, ಮುರಳಿ, ಗೌರಿದೇವಿ, ವಿರಾಟ್ ಸಿಂಗ್, ವನ್ಯಸಿಂಗ್, ರಾಜೇಶ್‌ಕುಮಾರ್, ಮಾಣಿಕ್‌ಚಂದ್ ಇತರರು ಇದ್ದರು.  
ಜಿಲ್ಲೆ

ಬಡ ಜನರಿಗೆ ನೇತ್ರ ಉಚಿತ ತಪಾಸಣೆ ಅನುಕೂಲ

ಮಾದೇಶ್ ತಿ.ನರಸೀಪುರ

ಬನ್ನೂರು: ಗ್ರಾಮೀಣ ಪ್ರದೇಶದ ಬಡ ಜನರಿಗೆ ನೇತ್ರ ಉಚಿತ ತಪಾಸಣೆ ಅನುಕೂಲವಾಗಲಿದೆ ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆ ಧರ್ಮದರ್ಶಿ ಎಂ.ಪ್ರಕಾಶ್ ಹೇಳಿದರು.


ಪಟ್ಟಣದ ರೋಟರಿ ಸಂಸ್ಥೆ , ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಸುಪ್ರೀಮ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ನೇತ್ರ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಇಂಥ ಸೇವಾ ಕಾರ್ಯವನ್ನು ನಿರಂತರವಾಗಿ ಪ್ರತಿ ತಿಂಗಳ 2ನೇ ಶನಿವಾರ ಜನರಿಗೆ ಲಭಿಸುವಂತೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.


ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಸುತ್ತಮುತ್ತಲಿನ ಗ್ರಾಮದಿಂದ 100ಕ್ಕೂ ಹೆಚ್ಚು ಜನರು ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡರು. 25 ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.


ರೋಟರಿ ಸಂಸ್ಥೆ ಅಧ್ಯಕ್ಷ ಬಸವನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಸಿ.ರಾಜು, ಕೆ.ರಾಜೇಶ್‌ಕುಮಾರ್, ಬಿ.ಎಸ್.ಯೋಗೇಂದ್ರ, ಪಾರ್ಥಸಾರಥಿ, ಹನುಮಂತೇಗೌಡ, ಮುರಳಿ, ಗೌರಿದೇವಿ, ವಿರಾಟ್ ಸಿಂಗ್, ವನ್ಯಸಿಂಗ್, ರಾಜೇಶ್‌ಕುಮಾರ್, ಮಾಣಿಕ್‌ಚಂದ್, ವಿಜಯ್‌ಕುಮಾರ್, ವೈದ್ಯರಾದ ಅಪರ್ಜಿತ, ಮುಕ್ತ ಇತರರು ಇದ್ದರು.