ಲಕ್ಷೆ್ಮೕಶ್ವರ: ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಜ. 10ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಜ್ಯೋತಿ ನರ್ಸಿಂಗ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಂಘಟಕರು ಮಂಗಳವಾರ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ತಾಲೂಕು ವೈದ್ಯರ ಸಂಘ (ರಿ)ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಶಿರಹಟ್ಟಿ ಹಾಗೂ ಲಕ್ಷೆ್ಮೕಶ್ವರ ವಿಶ್ವ ಕಂಪ್ಯೂಟರ್ ಅಕಾಡೆಮಿ, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ಲಕ್ಷೆ್ಮೕಶ್ವರ ಶಿರಹಟ್ಟಿ ತಾಲೂಕ ಔಷಧ ವ್ಯಾಪಾರಸ್ಥರ ಸಂಘ, ವಿಶ್ವ ಆರೋಗ್ಯ ಸಂಸ್ಥೆ ಆಶ್ರಯದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಶಿಬಿರದ ಸದುಪಯೋಗ ಪಡೆದುಕೊಳ್ಳ್ಳೇಕು ಎಂದು ಸಂಘಟಕರು ಮನವಿ ಮಾಡಿದರು. ಧರ್ಮಸ್ಥಳ ಯೋಜನೆ ಯೋಜನಾಧಿಕಾರಿ ಪುನೀತ್ ಓಲೇಕಾರ, ಡಾ.ಪಿ.ಡಿ. ತೋಟದ, ಸಿ.ಆರ್. ಲಕ್ಕುಂಡಿಮಠ, ಡಾ.ಪ್ರಸನ್ನ ಕುಲಕರ್ಣಿ, ಡಾ.ಎ.ಎಚ್. ಅಮರಶೆಟ್ಟಿ, ಬಸವರಾಜ ಸಂಗಪ್ಪಶೆಟ್ಟರ, ಧರ್ಮಸ್ಥಳ ಸಂಘದ ವಲಯ ಮೇಲ್ವಿಚಾರಕಿಯರಾದ ಶ್ರುತಿ, ರೇಣುಕಾ, ವಾಯಿದಾ, ಇತರರಿದ್ದರು.