ಬಬಲೇಶ್ವರ ತಾಲೂಕಿನ ಕಣಬೂರಿನ ಶ್ರೀ ರಾಚೋಟೇಶ್ವರ ಜಾತ್ರೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಡಾ. ಆನಂದ ಕಣಬೂರ, ಡಾ. ವಿಜಯೀಂದ್ರ ಕಣಬೂರ ಮತ್ತಿತರರಿದ್ದರು. 
ಜಿಲ್ಲೆ

ಕಣಬೂರಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಗಿರೀಶ ಸಗರ

ವಿಜಯಪುರ : ಬಬಲೇಶ್ವರ ತಾಲೂಕಿನ ಕಣಬೂರಿನ ಸುಪ್ರಸಿದ್ಧ ಶ್ರೀ ರಾಚೋಟೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನೇತ್ರ ಹಾಗೂ ಮಧುಮೇಹ ರೋಗ ಉಚಿತ ತಪಾಸಣೆ ಶಿಬಿರ ನಡೆಯಿತು.

ಶ್ರೀ ರಾಚೋಟೇಶ್ವರ ಗ್ರಾಮೀಣಾಭಿವೃದ್ಧಿ ಜನಸೇವಾ ಸಂ ಹಾಗೂ ಜನಮಿತ್ರ ಸೋಷಿಯಲ್​ ಅಸೋಸಿಯೇಷನ್​ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ನಗರದ ಕಣಬೂರ ಕಣ್ಣಿನ ಆಸ್ಪತ್ರೆ ಹಾಗೂ ಕಣಬೂರ ಮಧುಮೇಹ ಮತ್ತು ಹೆಲ್ತ್​ ಕೇರ್​ ಸೆಂಟರ್​ ವತಿಯಿಂದ ತಪಾಸಣೆ ನಡೆಸಲಾಯಿತು.

ಕಣಬೂರ ಆಸ್ಪತ್ರೆ ನೇತ್ರ ತ ಡಾ. ಆನಂದ ಕಣಬೂರ ಹಾಗೂ ಮಧುಮೇಹ ತ ಡಾ. ವಿಜಯೀಂದ್ರ ಕಣಬೂರ ಶಿಬಿರದಲ್ಲಿ ಭಾಗವಹಿಸಿದ್ದರು. 200 ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.

ಜನಸೇವಾ ಸಂದ ರಾಜೇಂದ್ರ ಪಾಟೀಲ, ರಂಗಪ್ಪ ಬಾಚಕ್​, ಶ್ರೀಧರ ಮಂಟೂರ ಮತ್ತಿತರರಿದ್ದರು.