ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹೆಬ್ರಿ ತಾಲೂಕು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಉಡುಪಿ ಪ್ರಸಾದ್ ನೇತ್ರಾಲಯ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಅಜೆಕಾರಿನ ರಾಮಮಂದಿರ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಶಿಬಿರ ಉದ್ಘಾಟಿಸಿ ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆಗಾಗಿ ನಾವೇ ಜವಾಬ್ದಾರಿಯುತವಾಗಿ ಜಾಗ್ರತೆ ವಹಿಸಬೇಕಾಗಿದೆ. ಅದೇ ರೀತಿ ನಮ್ಮ ಮನೆಯ ಕಸವನ್ನು ರಸ್ತೆ ಬದಿಗೆ ಹಾಕದೆ ನಾವೇ ವಿಲೇವಾರಿ ಮಾಡಬೇಕು, ಪರಿಸರ ಜಾಗೃತಿ ಮೂಡಿಸಬೇಕು ಎಂದರು.
ಉಡುಪಿ ಪ್ರಸಾದ್ ನೇತ್ರಾಲಯದ ಕಣ್ಣಿನ ತಜ್ಞೆ ಡಾ.ಪ್ರತಿಭಾ ಕಣ್ಣಿನ ಆರೋಗ್ಯ ಕುರಿತು ಮಾಹಿತಿ ನೀಡಿದರು. ಜನಜಾಗೃತಿ ವೇದಿಕೆ ಸದಸ್ಯ ನಂದಕುಮಾರ್, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಜನಜಾಗೃತಿ ಸದಸ್ಯರಾದ ಯಶೋದಾ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಪ್ರವೀಣ್ ಮಡಿವಾಳ, ಪ್ರಸಾದ್ ನೇತ್ರಾಲಯದ ಸಿಬ್ಬಂದಿ, ಜ್ಞಾನವಿಕಾಸ ಸಮನ್ವಯಧಿಕಾರಿ ಚಂದ್ರಾವತಿ, ಮೇಲ್ವಿಚಾರಕಿ ನಿಶ್ಮಿತಾ, ಸೇವಾ ಪ್ರತಿನಿಧಿ ವಿಜಯ ಕಾಮತ್, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.