ಸುಂಟಿಕೊಪ್ಪದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಶಿಬಿರದಲ್ಲಿ ಜನರು ತಪಾಸಣೆ ಮಾಡಿಸಿಕೊಳ್ಳುತ್ತಿರುವುದು. 
ಜಿಲ್ಲೆ

ಸುಂಟಿಕೊಪ್ಪದಲ್ಲಿ ಉಚಿತ ನೇತ್ರ ಶಿಬಿರ

ಸುಂಟಿಕೊಪ್ಪ: ಸುಂಟಿಕೊಪ್ಪ ಜೆಸಿಐ ಸಂಸ್ಥೆ ಹಾಗೂ ವಿಷನ್ ಸ್ಟ್ರಿಂಗ್ ಸಹಯೋಗದಲ್ಲಿ ಮಂಗಳವಾರ ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಜೆಸಿಐ ಸಂಸ್ಥೆ ಯ ನಿಕಟಪೂರ್ವ ವಲಯಾಧ್ಯಕ್ಷ ದೇವಿ ಪ್ರಸಾದ್, ಮನುಷ್ಯನ ದೇಹದಲ್ಲಿ ಕಣ್ಣು ಪ್ರಧಾನ ಅಂಗವಾಗಿದ್ದು, ಅದನ್ನು ಸೂಕ್ಷ್ಮತೆಯಿಂದ ಕಾಪಾಡಿಕೊಳ್ಳಬೇಕು. ಕಣ್ಣಿನ ದೃಷ್ಟಿ ಸರಿಯಾಗಿದ್ದರೆ ಸ್ವತಂತ್ರವಾಗಿ ಜೀವಿಬಹುದೆಂದು ಹೇಳಿದರು.

ನೇತ್ರ ತಜ್ಞ ಡಾ.ಅವಿನಾಶ್ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ಉಪಯೋಗವಾಗುವ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವೆಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡೆನ್ನಿಸ್ ಡಿಸೋಜ, ಜಿ.ಬಿ.ಹರೀಶ್, ಎಚ್.ಆರ್.ಅರುಣ್ ಕುಮಾರ್, ಪ್ರೀತಂ, ಪ್ರಭಾಕರ್, ನಿಯಾಜ್ ಇತರರು ಉಪಸ್ಥಿತರಿದ್ದರು.

ಅಭೂತಪೂರ್ವ ಯಶಸ್ಸು ಕಂಡ ಶಿಬಿರ ಜನರ ಒತ್ತಾಯ ಮತ್ತು ಬೇಡಿಕೆ ಹಿನ್ನಲೆಯಲ್ಲಿ ಸೆ.18ರಂದು ಮುಂದುವರಿಯಲಿದೆ ಎಂದು ಅಧ್ಯಕ್ಷ ಸಂಪತ್ ಕುಮಾರ್ ಹೇಳಿದರು. ಶಿಬಿರದಲ್ಲಿ 162 ಜನರು ತಪಾಸಣೆಗೊಳಪಟ್ಟರು.