ಜಿಲ್ಲೆ

ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕೊಪ್ಪದಲ್ಲಿ 38 ಎಕರೆ ಜಾಗ ಗುರುತಿಸಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಕೀರ್ತಿ ೌಂಡೇಷನ್ ಅಧ್ಯಕ್ಷ ಕೀರ್ತಿರಾಜ್ ಶೆಟ್ಟಿ ಹೇಳಿದರು.

ಬಂಟರ ಯಾನೆ ನಾಡವರ ಸಂಘ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶ ಹೊಂದಿದ್ದು, ಈಗಾಗಲೇ ಕೊಪ್ಪದಲ್ಲಿ 38 ಎಕರೆ ಜಾಗ ಗುರುತಿಸಿ ಖರೀದಿಸಲಾಗಿದೆ. ಅಲ್ಲಿ ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಲೋಚನೆ ಹೊಂದಲಾಗಿದೆ.

ಕೀರ್ತಿ ೌಂಡೇಷನ್‌ನಿಂದ 60 ಶಾಲೆಗಳನ್ನು ದತ್ತು ಪಡೆದಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೀರ್ತಿ ೌಂಡೇಷನ್ ಬಂಟರ ಸಮುದಾಯದ ಏಳ್ಗೆಗಾಗಿ ಶ್ರಮಿಸುತ್ತಿದ್ದು, ಕ್ರೀಡೆ, ಶಿಕ್ಷಣ, ಆರೋಗ್ಯದ ಕುರಿತು ಕಾಳಜಿ ವಹಿಸಿ ಸಹಾಯಧನ ಮಾಡುತ್ತಿದೆ ಎಂದರು.

ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ.ಸುನೀಲ್‌ಕುಮಾರ್ ರೈ ಮಾತನಾಡಿ, ಬಂಟರ ಸಂಘದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಹಲವು ಬದಲಾವಣೆಗಳ ಮೂಲಕ ಸಂಘ ಯಶಸ್ಸಿನ ಹಾದಿಯತ್ತ ಮುನ್ನಡೆಯುತ್ತಿದೆ. ಯಾವುದೇ ಸಂಘ ಸಂಸ್ಥೆ ನಿಂತ ನೀರಾಗದೆ ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಯಶಸ್ಸು ಸಾಧ್ಯ. ಸಮುದಾಯದ ಯುವಕರು ವಿದ್ಯಾಭ್ಯಾಸ ಪಡೆದಾಗ ಮಾತ್ರ ಸಮುದಾಯ ಬಲಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಬಂಟರ ಸಂಘದಿಂದ ಪ್ರತಿ ವರ್ಷ ಪ್ರತಿಭಾವನ್ವಿತರಿಗೆ 2 ರಿಂದ 3 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ವಿದ್ಯಾರ್ಥಿ ವೇತನದ ದಾನಿ ಬೆಂಗಳೂರು ಅಮ್ಮಣ್ಣಿ ರಾಮಣಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಶೇಖರಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ರಾ.ವೆಂಕಟೇಶ್ ಶೆಟ್ಟಿ, ಚಿಕ್ಕಮಗಳೂರು ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ, ಯುವ ಬಂಟರ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ರೈ, ಪ್ರಮುಖರಾದ ನಯನ ಶೆಟ್ಟಿ, ಸುಚಿತಾ ಹೆಗ್ಡೆ, ಸೌಮ್ಯ, ನಟರಾಜ್ ಶೆಟ್ಟಿ, ವಿದ್ಯಾಶೆಟ್ಟಿ, ಹೇಮಲತಾ ಪ್ರಭಾಕರ್, ಸನತ್ ಶೆಟ್ಟಿ ಮತ್ತಿತರರು ಹಾಜರಿದ್ದರು.