ಜಿಲ್ಲೆ

ಕಿವಿ, ಮೂಗು, ಗಂಟಲಿನ ಉಚಿತ ತಪಾಸಣೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಕೊಯಿನ್ ರಸ್ತೆಯ ಕೆಎಲ್​ಇ ಕೋ ಆಪರೇಟಿವ್ ಆಸ್ಪತ್ರೆಯಲ್ಲಿ ಮೇ 31ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಿವಿ, ಮೂಗು, ಗಂಟಲಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಟಾನ್ಸಿಲ್ (ಗಲಗ್ರಂಥಿ) ಗಳಿಗೆ ಸಂಬಂಧಿಸಿದ ರೋಗದ ತಪಾಸಣೆ ಉಚಿತ ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.

ಶಿಬಿರದಲ್ಲಿ ತಪಾಸಣೆ ಮಾಡಿಕೊಳ್ಳಲು ಬರುವ ಸಾರ್ವಜನಿಕರು ಆಧಾರ್ ಕಾರ್ಡ್ ತರಬೇಕು.