ಲೋಕಾಪುರ ಸಮೀಪದ ಮುದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. 
ಜಿಲ್ಲೆ

ದಂತ ಉಚಿತ ತಪಾಸಣೆ ಶಿಬಿರ

Vijayapura - Desk - Gurappa Lokuri

ಲೋಕಾಪುರ: ಸಮೀಪದ ಮುದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆ ಹಾಗೂ ರೆಡ್ಡಿ ಮೈನ್ಸ್ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳ ದಂತ ಉಚಿತ ತಪಾಸಣೆ ಶಿಬಿರ ನಡೆಯಿತು.

ಎಸ್‌ಡಿಎಂಸಿ ಉಪಾಧ್ಯಕ್ಷ ಸಿದ್ದಪ್ಪ ಮಾಳಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹಲ್ಲಿನ ತೊಂದರೆಗಳನ್ನು ವೈದ್ಯರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ದಂತ ವೈದ್ಯ ಡಾ. ಪ್ರಶಾಂತ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ಕಂಡು ಬರುವ ಹುಳುಕಾದ ಹಲ್ಲುಗಳು, ಉಬ್ಬು ಹಲ್ಲುಗಳು, ಕೋರೆ ಹಲ್ಲುಗಳು, ವಕ್ರದಂತ ಹೀಗೆ ಹಲವಾರು ಹಲ್ಲಿನ ಸಮಸ್ಯೆಗಳು ಕಂಡು ಬರುತ್ತವೆ. ಹಲ್ಲುಗಳ ಉಜ್ಜುವ ಕ್ರಮ ಮತ್ತು ಸ್ವಚ್ಛತೆ ಕುರಿತು ಸಲಹೆ ನೀಡಿದರು.

ಶಾಲೆಯ ಒಟ್ಟು 240 ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಲಾಯಿತು.

ಪ್ರಭಾರಿ ಮುಖ್ಯಶಿಕ್ಷಕ ಡಾ. ಸಿದ್ದಣ್ಣ ಬಾಡಗಿ, ಸಂಸ್ಥೆ ಸಂಸ್ಥಾಪಕ ಸುರೇಶ ರೆಡ್ಡಿ, ರೋಟರಿ ಸಂಸ್ಥೆ ಅಧ್ಯಕ್ಷ ಅಭಿಷೇಕ ತಲಾಟಿ, ಪದಾಧಿಕಾರಿಗಳು, ಮೈನ್ಸ್ ಸಂಸ್ಥೆ ಸದಸ್ಯರು ಇದ್ದರು.

ಸಿ.ಎಸ್. ಸಿದ್ದಾಪುರ ಪ್ರಾರ್ಥಿಸಿದರು. ಸಂತೋಷ ಗೊಳಸಂಗಿ ಸ್ವಾಗತಿಸಿದರು. ಶಿಕ್ಷಕ ಪಿ.ಎಂ. ಹೊಸಮಠ ವಂದಿಸಿದರು.