ವಿಜಯಪುರದ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಾರಂಭವಾದ ವಿವಿಧ ಸೇವೆಗಳಿಗೆ ಶಾಸಕ ವಿಠಲ ಕಟಕದೊಂಡ ಚಾಲನೆ ನೀಡಿದರು. ಡಾ. ಎಲ್​.ಎಚ್​. ಬಿದರಿ ಮತ್ತಿತರರಿದ್ದಾರೆ. 
ಜಿಲ್ಲೆ

23 ರಿಂದ 31 ರವರೆಗೆ ಉಚಿತ ಹೆರಿಗೆ, ಶಸ್ತ್ರಚಿಕಿತ್ಸೆ

ಗಿರೀಶ ಸಗರ

ವಿಜಯಪುರ : ಇಲ್ಲಿನ ಚಿಕ್ಕಮಕ್ಕಳ ಖ್ಯಾತ ಆಸ್ಪತ್ರೆ ಡಾ. ಬಿದರಿ ಅಶ್ವಿನಿ ಆಸ್ಪತ್ರೆಯ ಸಿರೋಗ ಹಾಗೂ ಪ್ರಸೂತಿ ವಿಭಾಗದ ವತಿಯಿಂದ ಜ. 23 ರಿಂದ ಮಾರ್ಚ್​ 31ರವರೆಗೆ ಬಿಪಿಎಲ್​ ಕಾರ್ಡ್​ ಹೊಂದಿದ ಮಹಿಳೆಯರಿಗೆ ಮಕ್ಕಳ ಹೆರಿಗೆ, ಸಿಜೇರಿಯನ್​ ಶಸ ಚಿಕಿತ್ಸೆ, ನವಜಾತ ಶಿಶುಗಳ ಆರೈಕೆ ಮತ್ತು ಎಎನ್​ಸಿ ವಿವಿಧ ಸೇವೆಗಳು ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.

ನಗರದ ಗಚ್ಚಿನಕಟ್ಟಿ ಕಾಲನಿ ಬಳಿಯ ಚಿಕ್ಕಮಕ್ಕಳ ಡಾ. ಬಿದರಿ ಅಶ್ವಿನಿ ಆಸ್ಪತ್ರೆಯ ಸಿರೋಗ ಹಾಗೂ ಪ್ರಸೂತಿ ವಿಭಾಗದ ವತಿಯಿಂದ ಪ್ರಾರಂಭವಾದ ಉಚಿತ ಮಕ್ಕಳ ಹೆರಿಗೆ, ಸಿಜೇರಿಯನ್​, ನವಜಾತು ಶಿಶುಗಳ ಆರೈಕೆ ಹಾಗೂ ಎಎನ್​ಸಿ ಸೇವೆಗಳಿಗೆ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿದರಿಯವರ ಆಸ್ಪತ್ರೆಯು ಅತ್ಯುತ್ತಮ ವೈದ್ಯಕಿಯ ಸೇವೆಯ ಜತೆಗೆ ಒಂದೇ ಸೂರಿನಡಿ ಮಕ್ಕಳ ಹೆರಿಗೆ ಮತ್ತು ನವಜಾತು ಶಿಶುವಿನ ಆರೈಕೆ ನೀಡುವ ಹಿನ್ನೆಲೆಯಲ್ಲಿ ಪಾಲಕರಿಗೆ ಅನುಕೂಲ ಕಲ್ಪಿಸುತ್ತಿದೆ. ಅಲ್ಲದೆ, ಉಚಿತ ಸೇವೆಯ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದೆ ಎಂದರು.

ಆಸ್ಪತ್ರೆಯ ಮುಖ್ಯಸ್ಥ ಡಾ. ಎಲ್​.ಎಚ್​. ಬಿದರಿ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಹೈ&ಟೆಕ್​ ಸೌಲಭ್ಯಗಳು ಹಾಗೂ ನುರಿತ ವೈದ್ಯರ ತಂಡವಿದೆ. ಬಿಪಿಎಲ್​ ಕಾರ್ಡ್​ ಹೊಂದಿದ ಜನರಿಗೆ ಉಚಿತ ಸೇವೆ ಹಾಗೂ ಕಾರ್ಡ್​ ಇಲ್ಲದವರಿಗೂ ಕೂಡ ನಮ್ಮ ಆಸ್ಪತ್ರೆಯಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಸೇವೆಯನ್ನು ನೀಡಲಾಗುತ್ತಿದೆ ಎಂದರು.