ಸುದ್ದಿಗೋಷ್ಠಿಯಲ್ಲಿ ಶಹರಾಜ್ ಮುಜಾಹಿದ್ ಸಿದ್ದಿಕಿ ಮಾತನಾಡಿದರು. ಹಬೀಬುಲ್ಲಾ ರೆಹಮಾನ್ ಮುಂತಾದವರಿದ್ದರು.  
ಜಿಲ್ಲೆ

ಭರವಸೆ ಈಡೇರಿಸದಿದ್ದಕ್ಕೆ ಸ್ವತಂತ್ರ ಸ್ಪರ್ಧೆ

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದ್ದರೂ 2ಬಿ ಮೀಸಲಾತಿ ಸೇರಿ ಅಲ್ಪಸಂಖ್ಯಾತರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ವಕೀಲ ಶಹರಾಜ್ ಮುಜಾಹಿದ್ ಸಿದ್ದಿಕಿ ಹೇಳಿದರು.

ಕಾಂಗ್ರೆಸ್ ಸೇರಿ ಯಾವ ರಾಜಕೀಯ ಪಕ್ಷವೂ ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ. ನಮ್ಮ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಾನು 16 ವರ್ಷಗಳಿಂದ ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದೇನೆ. ನಮ್ಮ ಸಮುದಾಯಕ್ಕೆ ಸೂಡಾ ಅಧ್ಯಕ್ಷ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದರು. ಅದು ಸಹ ಹುಸಿಯಾಗಿದೆ. ಪ್ರಮುಖ ನಿಗಮ ಮಂಡಳಿಗಳಲ್ಲೂ ನಮ್ಮ ಸಮಾಜಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ಪ್ರಮುಖರಾದ ಹಬೀಬುಲ್ಲಾ ರೆಹಮಾನ್, ಅತಾವುಲ್ಲಾ ಖಾನ್, ಜಹಾಂಗೀರ್ ಆಲಂ ಖಾನ್, ಮೊಹಮ್ಮದ್ ರಫೀ, ಸೈಯ್ಯದ್ ಶಫೀವುಲ್ಲಾ, ಶಬ್ಬೀರ್ ಸುದ್ದಿಗೋಷ್ಠಿಯಲ್ಲಿದ್ದರು.