ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

ಆರ್.ಕೃಷ್ಣ

ಮೈಸೂರು: ಮೈಸೂರು ವಿಶ್ವವಿದ್ಯಾಲಯ, ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾಕೇಂದ್ರ, ಯುಸಿಎಚ್ ಹಾಗೂ ನವೋ ಪ್ರಮತಿ ಸ್ಪರ್ಧಾ ಕೇಂದ್ರದಿಂದ ಕೆಪಿಎಸ್‌ಸಿ ನಡೆಸುವ ವಿವಿಧ ಗ್ರೂಪ್ ಸಿ ಹುದ್ದೆ, ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ.
ಒಂದು ದಿನದ ಉಚಿತ ಕಾರ್ಯಾಗಾರ ಮತ್ತು ಆಯ್ಕೆಯಾದ ಆಸಕ್ತ ಅಭ್ಯರ್ಥಿಗಳಿಗೆ 60 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಆಸಕ್ತರು ಜೂ.20ರ ಒಳಗೆ ತಮ್ಮ ಹೆಸರನ್ನು ಸ್ಪರ್ಧಾತ್ಮಕ ಕೇಂದ್ರ, ಮೊದಲನೇ ಮಹಡಿ, ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಮಹಾರಾಜ ಕಾಲೇಜು ಆವರಣ, ಮೈಸೂರು ಇಲ್ಲಿ ನೊಂದಾಯಿಸಿಕೊಳ್ಳುವುದು. ಮಾಹಿತಿಗೆ ಮೊ.9731139407, 9538762152 ಸಂಪರ್ಕಿಸಬಹುದು ಎಂದು ಸಂಚಾಲಕ ಎನ್.ಎಸ್.ಪುಟ್ಟಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.