ಉಪ್ಪಿನಬೆಟಗೇರಿ: ಸಾರ್ವಜನಿಕರು ಕ್ಯಾನ್ಸರ್ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಎಂ. ವಿಜಾಪೂರ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾರತೀಯ ಕ್ಯಾನ್ಸರ್ ಸಂಸ್ಥೆ ಹಾಗೂ ಹುಬ್ಬಳ್ಳಿಯ ರೆಡಾನ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ರೋಗದ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ರೋಗದ ಗುಣ ಲಕ್ಷಣಗಳ ಬಗ್ಗೆ ಮುಂಜಾಗ್ರತೆ ಕ್ರಮವಾಗಿ ತಪಾಸಣೆಗೆಂದು ಭಾರತೀಯ ಕ್ಯಾನ್ಸರ್ ಸಂಸ್ಥೆ ಹಾಗೂ ಹುಬ್ಬಳ್ಳಿಯ ರೆಡಾನ್ ಆಸ್ಪತ್ರೆ, ಸಹಯೋಗದೊಂದಿಗೆ ಕ್ಯಾನ್ಸರ್ ಶಿಬಿರ ಹಮ್ಮಿಕೊಳ್ಳಲಾಗಿದೆ ಎಮದು ತಿಳಿಸಿದರು.
ಶಿಬಿರದಲ್ಲಿ ಸುಮಾರು 81 ಜನರಿಗೆ ಉಚಿತವಾಗಿ ಬಿ.ಪಿ., ಶುಗರ್, ಸ್ಕ್ರೀನಿಂಗ್ ತಪಾಸಣೆ ನಡೆಸಲಾಯತು. ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ, ಪಿಡಿಒ ಬಿ.ಎ.ಬಾವಾಕಾನವರ, ಡಾ.ಆಮೀರ ಎಂ, ಡಾ.ನಿವೇದಿತಾ, ಸಂತಾನಿ ದಂಡಿನ, ಮೊಹಮ್ಮದ ಜಬೀರ, ಶಿಲ್ಪಾ ಹೂಲಿಕಟ್ಟಿ, ವೆಂಕಟೇಶ ಸಿ.ಎಲ್., ಗೀತಾ ಓರಣಕರ, ಶಶಿಕಲಾ ಅರವಾಳ, ವನಿತಾ ಶಿನಗಾರಿ, ಶಶಿಕಲಾ ಗಳಗಿ, ಫಕೀರಪ್ಪ ಶಿವಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.