ಜಿಲ್ಲೆ

ಸರ್ಕಾರಿ ಶಾಲೆಯಲ್ಲಿ ಬ್ಯಾಗ್‌ರಹಿತ ದಿನ ಆಚರಣೆ

Kodagu

ಶನಿವಾರಸಂತೆ: ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್ ರಹಿತ ದಿನವನ್ನು ಶನಿವಾರ ವಿಭಿನ್ನವಾಗಿ ಆಚರಿಸಲಾಯಿತು.

ತಲೆಗೆ ಟೋಪಿ ಹಾಕಿಕೊಂಡು, ಕೈಯಲ್ಲಿ ಮ್ಯಾಜಿಕ್ ಸ್ಟಿಕ್ ಹಿಡಿದು ಪಕ್ಕಾ ಜಾದೂಗಾರನಂತೆ ಶಾಲೆಗೆ ಆಗಮಿಸಿದ ಶಿಕ್ಷಕ ಸಿ.ಎಸ್.ಸತೀಶ್ ಎಲ್ಲರ ಗಮನ ಸೆಳೆದರಲ್ಲದೆ, ಮ್ಯಾಜಿಕ್ ಟ್ರಿಕ್ಸ್ ಹೇಳಿಕೊಟ್ಟರು. ಕೆಲವು ತಂತ್ರಗಾರಿಕೆಯನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸುವುದರ ಜತೆಗೆ ಅದರ ಹಿಂದಿರುವ ತಂತ್ರಗಾರಿಕೆಯನ್ನು ಮಕ್ಕಳಿಗೆ ತಿಳಿಸಿದರು.

ವಿದ್ಯಾರ್ಥಿಗಳ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಅವರಲ್ಲಿ ಜ್ಞಾನವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಶಾಲೆಯಲ್ಲಿ ಬ್ಯಾಗ್‌ಲೆಸ್ ದಿನದಂದು ಮ್ಯಾಜಿಕ್ ಟ್ರಿಕ್ಸ್ ಚಟುವಟಿಕೆಯನ್ನು ನಡೆಸಲಾಗಿದೆ. ಇದರಿಂದ ಕೆಲವು ವಿದ್ಯಾರ್ಥಿಗಳಿಗೆ ಮುಂದೊಂದು ದಿನ ಮ್ಯಾಜಿಕ್ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಪ್ರೇರಣೆಯೂ ಆಗಬಹುದು.
ಸಿ.ಎಸ್.ಸತೀಶ್, ಸಹ ಶಿಕ್ಷಕ.