ಜಿಲ್ಲೆ

ಆಯುರ್ವೇದ ವೈದ್ಯಕೀಯ ಉಚಿತ ಶಿಬಿರ

ಸೌಮ್ಯ ಆರ್

ಉಳ್ಳಾಲ: ಜಾಗೃತ ವಿವಿಧೋದ್ದೇಶ ಸಹಕಾರ ಸಂಘ, ಹರೀತಕೀ ಆಯುರ್ವೇದ ಕ್ಲಿನಿಕ್ ಮತ್ತು ಪಂಚಕರ್ಮ ಸೆಂಟರ್ ಆಶ್ರಯದಲ್ಲಿ ಆಯುರ್ವೇದ ವೈದ್ಯಕೀಯ ಉಚಿತ ಶಿಬಿರ ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ ಭಾನುವಾರ ನಡೆಯಿತು.

ಸಂಘದ ಅಧ್ಯಕ್ಷ ಆನಂದ ಬಿ. ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಡಾ.ಹರಿಪ್ರಸಾದ್ ಬಿ. ಮಾತನಾಡಿದರು. ಶ್ರೀ ಶಾರದಾ ಸೇವಾ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಸಂಘದ ಉಪಾಧ್ಯಕ್ಷ ಸುರೇಶ್ ಉಳಿಯ, ನಿರ್ದೇಶಕರಾದ ಯು.ಐತಪ್ಪ ಶೆಟ್ಟಿಗಾರ್, ಯು.ಲಕ್ಷ್ಮಣ ಅಬ್ಬಕ್ಕನಗರ, ಕರುಣಾಕರ ಆಳ್ವ, ಉಮಾನಾಥ್ ನ್ಯಾಕ್, ಲೋಕೇಶ್ ಬಿ.ಸಾಲ್ಯಾನ್, ಎ.ಜಗದೀಶ್ ನ್ಯಾಕ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಪ್ರದೀಪ್ ನಿರೂಪಿಸಿದರು. ನಿರ್ದೇಶಕಿ ಯು.ಜಾನಕಿ ಪುತ್ರನ್ ವಂದಿಸಿದರು. ವ್ಯವಸ್ಥಾಪಕಿ ಮಲ್ಲಿಕಾ ಶಿಬಿರ ಸಂಯೋಜಿಸಿದ್ದರು.