ಜಿಲ್ಲೆ

ಕಾರು ಮಾರಾಟದ ಹೆಸರಲ್ಲಿ ಹಣ ಪಡೆದು ವಂಚನೆ

ಮಂಗಳೂರು: ಒಎಲ್‌ಎಕ್ಸ್ ಆ್ಯಪ್‌ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದ ಉತ್ತರ ಕನ್ನಡ ಬನವಾಸಿ ಸೊರಬಾ ರಸ್ತೆ ನಿವಾಸಿ ರವಿಚಂದ್ರ ರೇವಣಕರ (29) ವಿರುದ್ಧ ಮತ್ತೊಂದು ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ.

ಒಎಲ್‌ಎಕ್ಸ್ ಆ್ಯಪ್‌ನಲ್ಲಿ ಕಾರು ಮಾರಾಟದ ಬಗ್ಗೆ ಶ್ರಾವ್ಯ ಶ್ರೀಪತಿ ಎಂಬವರ ಹೆಸರಿನಲ್ಲಿದ್ದ ಜಾಹೀರಾತನ್ನು ನೋಡಿದ ದೂರುದಾರರು ಮೇ 1ರಂದು ಜಾಹೀರಾತಿನ ಚಾಟ್ ಮೇಲೆ ಕ್ಲಿಕ್ ಮಾಡಿದ್ದಾರೆ. ಮೇ 8ರಂದು ರವಿಚಂದ್ರ ಎಂ. ರೇವಣಕರ ಕರೆ ಮಾಡಿ, ಕಾರು ತಂದು ಕೊಡುವುದಾಗಿ ತಿಳಿಸಿದ್ದಾನೆ. ಬಳಿಕ ಹಂತ ಹಂತವಾಗಿ 3.30 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ. ಅನಂತರ ಪ್ರತಿದಿನ ರವಿಚಂದ್ರ ಮತ್ತು ಆತನ ತಂದೆ ಎಂದು ಹೇಳಿಕೊಳ್ಳುವ ವ್ಯಕ್ತಿ ಕರೆ ಮಾಡಿ ಕಾರನ್ನು ಶೀಘ್ರವೇ ತಲುಪಿಸುತ್ತೇನೆ ಎಂದು ತಿಳಿಸುತ್ತಿದ್ದ. ಕಾರು ರಿಪೇರಿಯಲ್ಲಿದೆ ಎನ್ನುವ ಕಾರಣವನ್ನೂ ನೀಡುತ್ತಿದ್ದ.

ಕಾರು ತಂದು ಒಪ್ಪಿಸದ ಕಾರಣ ಹಣ ವಾಪಾಸು ನೀಡುವಂತೆ ಕೇಳಿದಾಗ, ಜೂ.6ರಂದು ಪ್ರೀತಿ ಪವರ್ ಎಂಬ ಹೆಸರಿನಲ್ಲಿ ಖಾಸಗಿ ಬ್ಯಾಂಕ್ ಒಂದರ ಗಂಗಾವತಿ ಶಾಖೆಯಿಂದ 3.30 ಲಕ್ಷ ರೂ. ಹಣಕ್ಕೆ ಚೆಕ್ ಬರೆದು ಅಕೌಂಟ್‌ಗೆ ಹಣ ವರ್ಗಾಯಿಸಿರುವುದಾಗಿ ವಾಟ್ಸಾಪ್ ಮೂಲಕ ಚೆಕ್ ೆಟೋ ಕಳುಹಿಸಿದ್ದಾನೆ. ಖಾತೆಗೆ ಹಣ ಬಾರದೇ ಇದ್ದಾಗ ದೂರುದಾರರು ಮತ್ತೆ ಆತನಿಗೆ ಕರೆ ಮಾಡಿದ್ದು, ನಾಳೆ ಬರುತ್ತದೆ ಎಂದು ಕೆಲವು ದಿನ ಮುಂದೂಡಿದ್ದಾನೆ.

ಜೂ.13ರಂದು 10 ಸಾವಿರ ರೂ. ಹಣವನ್ನು ದೂರುದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, ಉಳಿದ 3.20 ಲಕ್ಷ ರೂ. ಹಣವನ್ನು ಖಾತೆಗೆ ಜಮೆ ಮಾಡದೆ, ಕಾರನ್ನೂ ನೀಡದೆ ಸತಾಯಿಸಿದ್ದಾನೆ. ಆ ಬಳಿಕ ಮೊಬೈಲ್ ಸ್ವಿಚ್ ಆ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.