ಹಾನಗಲ್ಲ: ಹೋಟೆಲ್ಗಳಿಗೆ ರೇಟಿಂಗ್ಸ್ ನೀಡಿದರೆ ಹಣ ನೀಡುತ್ತೇವೆ ಎಂದು ಹೇಳಿ ವಿದ್ಯಾಥಿರ್ಯೊಬ್ಬನಿಗೆ 1.91 ಲಕ್ಷ ರೂ. ವಂಚಿಸಿರುವ ಕುರಿತು ತಾಲೂಕಿನ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಲಗುಂದ ಗ್ರಾಮದ ರಾಜು ಬಸವರಾಜ ಪೂಜಾರ (25) ಎಂಬುವರಿಗೆ ವಂಚಿಸಿರುವುದು.
ಈತನಿಗೆ ಕುಳಿತಲ್ಲೆ ಹಣ ಸಂಪಾದಿಸಿ ಎಂದು ಜಾಹೀರಾತು ಕಳುಹಿಸಿದ್ದು, ಆ ಲಿಂಕ್ನ್ನು ತೆಗೆದು ನೋಡಿದಾಗ ಕೆಲವು ಹೋಟೆಲ್ಗಳಿಗೆ ರೇಟಿಂಗ್ಸ್ ಕೊಟ್ಟರೆ ಹಣ ಸಂಪಾದಿಸಬಹುದು ಎಂದು ನಂಬಿಸಿ ಮೊದಲಿಗೆ ಒಂದು ಹೋಟೆಲ್ಗೆ ರೇಟಿಂಗ್ಸ್ ಕೊಟ್ಟಿದ್ದಕ್ಕಾಗಿ 4940 ರೂ. ಹಾಕಿದ್ದಾರೆ. ನಂತರ ಇವರ ಖಾತೆ ಮಾಹಿತಿ ಪಡೆದು 1.91 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.