ಮಂಗಳೂರು: ವರ್ಕ್ ್ರಂ ಹೋಮ್ ಹೆಸರಿನಲ್ಲಿ ಟಾಸ್ಕ್ ಪೂರ್ಣಗೊಳಿಸುವ ಕೆಲಸ ನೀಡಿ 16.06 ಲಕ್ಷ ರೂ ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವರ್ಕ್ ್ರಂ ಹೋಂ ಜಾಹೀರಾತು ನೋಡಿ ಸಂಪರ್ಕಿಸಲು ಲಿಂಕ್ ಗೆ ಕ್ಲಿಕ್ ಮಾಡಿದ್ದಾರೆ. ಆಗ ವಾಟ್ಸ್ ಆ್ಯಪ್‌ನಿಂದ ಎಚ್‌ಆರ್ ಅಸಿಸ್ಟೆಂಟ್ ಎನ್ನುವ ಹೆಸರಿನಲ್ಲಿ ಮೆಸೇಜ್‌ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿ ಗೂಗಲ್ ಮ್ಯಾಪ್‌ನಲ್ಲಿ ರೆಸ್ಟೋರೆಂಟ್ ಪರೀಶೀಲಿಸಿ 5 ಸ್ಟಾರ್ ನೀಡುವ ಕೆಲಸವನ್ನು ಕೊಟ್ಟಿದ್ದಾರೆ. ಬಳಿಕ ಟೆಲಿಗ್ರಾಮ್‌ಗೆ ಸೇರ್ಪಡೆಗೊಂಡಿದ್ದು, ಪಾವತಿಯಾಗಿ 180 ರೂ. ಪಡೆದುಕೊಂಡಿದ್ದಾರೆ. ಬಳಿಕ 20 ಟಾಸ್ಕ್ ಪೂರ್ಣಗೊಳಿಸಿ 200 ರೂ. ಪಡೆದುಕೊಂಡಿದ್ದಾರೆ. ವಿಐಪಿ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದು, ಅಲ್ಲಿ ಷೇರುಗಳಿಂದ ಕಮಿಷನ್ ಪಡೆಯುವ ಯೋಜನೆಗೆ 1000 ರೂ. ವರ್ಗಾವಣೆ ಮಾಡಿ ನೋಂದಾಯಿಸಿಕೊಂಡಿದ್ದಾರೆ. ಬಳಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತಿಳಿಸಿದಂತೆ ದೂರುದಾರರು ವಿವಿಧ ಖಾತೆಗಳಿಗೆ ಹಂತ ಹಂತವಾಗಿ 16,06,00 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಹಿಂಪಡೆಯಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಇದರಿಂದ ಅನುಮಾನುಗೊಂಡು ವಿಚಾರಣೆ ನಡೆಸಿದಾಗ ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.